ಲಂಡನ್ : ಜಮೈಕಾದ 23 ವರ್ಷದ ಚೆಲುವೆ ಟೋನಿ ಆನ್ಸಿಂಗ್2019ರ ವಿಶ್ವ ಸುಂದರಿ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್ ಆಗಿದ್ದಾರೆ.

ಇಲ್ಲಿನ ಎಕ್ಸೆಲ್ ಲಂಡನ್ನಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ಟೋನಿ ವಿಜಯಿಯಾಗಿ ಹೊರಹೊಮ್ಮಿದರು. ಟೋನಿ ಫ್ಲಾರಿಡಾ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರ ವಿಭಾಗದ ವಿದ್ಯಾರ್ಥಿನಿ.

ಫ್ರಾನ್ಸ್ನ ಒಪೆಲಿ ಮೆಜಿನೊ ಪ್ರಥಮ ರನ್ನರ್ ಅಪ್ ಆದರು. ದ್ವಿತೀಯ ರನ್ನರ್ ಅಪ್ ಆಗಿರುವ ಸುಮನ್ ರಾವ್ ರಾಜಸ್ಥಾನದವರು. 20 ವರ್ಷದ ಅವರು ಸಿ.ಎ ವಿದ್ಯಾರ್ಥಿನಿ. ಇದೇ ವರ್ಷದ ಜೂನ್ನಲ್ಲಿ ಅವರು ಮಿಸ್ ಇಂಡಿಯಾ ವರ್ಲ್ಡ್ ಗೌರವಕ್ಕೆ ಪಾತ್ರರಾಗಿದ್ದರು.

ಟೋನಿ ಅವರು ಸ್ಪರ್ಧೆಯಲ್ಲಿ ವಿಟ್ನಿ ಹೂಸ್ಟನ್ ಅವರ ‘ಐ ಹ್ಯಾವ್ ನಥಿಂಗ್..’ ಗೀತೆ ಹಾಡಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಕಳೆದ ಬಾರಿಯ ವಿಜೇತೆ, ಮೆಕ್ಸಿಕೊದ ವೆನೆಸ್ಸಾ ಪಾನ್ಸ್ ಡೆ ಲಿಯೊನ್ ವಿಜೇತೆಗೆ ವಿಶ್ವಸುಂದರಿ ಕಿರೀಟ ತೊಡಿಸಿದರು.

‘ತಮ್ಮ ಮೇಲೆ ವಿಶ್ವಾಸ ಇಡಬೇಕು ಹಾಗೂ ಕನಸು ನನಸಾಗಿಸಲು ಶ್ರಮಿಸಬೇಕು’ ಎಂದು ಅವರು ಯುವತಿಯರಿಗೆ ಕರೆ ನೀಡಿದರು. ಟೋನಿ ಪ್ರಶಸ್ತಿ ಮೂಲಕ 4ನೇ ಬಾರಿಗೆ ಜಮೈಕಾಗೆ ಈ ಹಿರಿಮೆ ತಂದರು. ಈ ಹಿಂದೆ ಜಮೈಕಾಗೆ 1963, 1976 ಮತ್ತು 1993ರಲ್ಲಿ ಈ ಗೌರವ ಪ್ರಾಪ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.