ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲಾ ಹ್ಯಾರಿಸ್, ಬೈಡನ್‌ಗಿಂತಲೂ ಕೆಟ್ಟ ಅಭ್ಯರ್ಥಿ: ಡೊನಾಲ್ಡ್ ಟ್ರಂಪ್

Published : 30 ಜುಲೈ 2024, 4:54 IST
Last Updated : 30 ಜುಲೈ 2024, 4:54 IST
ಫಾಲೋ ಮಾಡಿ
Comments

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದಿಂದ ಅಭ್ಯರ್ಥಿಯಾಗಿರುವ ಅಮೆರಿಕದ ಉಪಾಧ್ಯಕ್ಷೆ, ಭಾರತ ಮೂಲದ ಕಮಲಾ ಹ್ಯಾರಿಸ್, ಬೈಡನ್‌ಗಿಂತಲೂ ಕೆಟ್ಟ ಅಭ್ಯರ್ಥಿ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಜೋ ಬೈಡನ್ ಅವರು ವಾರದ ಹಿಂದೆ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದು, ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ಸೂಚಿಸಿದ್ದರು. ಮುಂದಿನ ತಿಂಗಳು ಪಕ್ಷವು ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆ ಇದೆ.

‘ಬೈಡನ್‌ಗಿಂತಲೂ ಕಮಲಾ ಹ್ಯಾರಿಸ್ ಅವರು ಕೆಟ್ಟ ಅಭ್ಯರ್ಥಿ ಎಂದು ನನಗೆ ಅನಿಸುತ್ತದೆ. ಬೈಡನ್‌ಗಿಂತಲೂ ಅವರು ಹೆಚ್ಚು ಮೂಲಭೂತವಾದಿ ಎಡಪಂಥೀಯರು’ ಎಂದು ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.

‘ಆಕೆ ನನಗಿಂತಲೂ ಸ್ವಲ್ಪ ಚಿಕ್ಕವಳು. ಅವರಿಗೆ 60 ವರ್ಷ. ಆದರೆ, ಅವರು 60 ವರ್ಷದವರು ಎಂದು ನನಗೆ ಅನಿಸುತ್ತಿಲ್ಲ. ಅವರು ಬಹಳ ದೊಡ್ಡ ಕೆಟ್ಟ ಆಟ ಆಡುತ್ತಿದ್ದಾರೆ. ತಾನು ಏನು ಅಲ್ಲವೋ ಅದನ್ನು ನಟಿಸಿ ತೋರಿಸಲು ಹೊರಟಿದ್ದಾರೆ’ಎಂದು ಟ್ರಂಪ್, ಕಮಲಾ ವಿರುದ್ಧ ಕಿಡಿಕಾರಿದ್ದಾರೆ.

‘ಅವರು(ಕಮಲಾ ಹ್ಯಾರಿಸ್) ಪೊಲೀಸರನ್ನು ವಂಚಿಸಿದ್ದಾರೆ. ಗಡಿಗಳನ್ನು ತೆರೆಸಿ ಅನಗತ್ಯ ಜನರನ್ನು ದೇಶಕ್ಕೆ ಬಿಟ್ಟುಕೊಂಡಿದ್ದಾರೆ. ಈಗ ಅವರಿಗೆ ಪೌರತ್ವದ ಒತ್ತಾಯ ಮಾಡುತ್ತಿದ್ದಾರೆ ಎಂದು ಕೇಳಿದ್ದೇನೆ. ಹಾಗೆ ಬಂದ ಪ್ರತಿಯೊಬ್ಬರಿಗೂ ಪೌರತ್ವ ಕೊಡುತ್ತಾ ಹೋದರೆ ದೇಶ ನಾಶವಾಗುತ್ತದೆ’ಎಂದು ಟ್ರಂಪ್ ಹೇಳಿದ್ದಾರೆ.

ಡೆಮಾಕ್ರಟಿಕ್ ಪಕ್ಷದಲ್ಲಿ ಎದ್ದ ದಂಗೆಯಿಂದಲೇ ಬೈಡನ್ ಅಧ್ಯಕ್ಷೀಯ ಚುನಾವಣೆ ಕಂದದಿಂದ ಹೊರಗುಳಿದರು ಎಂಬ ತಮ್ಮ ಮಾತನ್ನು ಪುನರುಚ್ಛರಿಸಿದ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಸದಸ್ಯರು ದೇಶದ ಅಧ್ಯಕ್ಷರ ವಿರುದ್ಧ ದಂಗೆ ಎಬ್ಬಿಸಿದರು ಎಂದಿದ್ದಾರೆ.

ಅಮೆರಿಕದಲ್ಲಿ ಈ ರೀತಿ ಎಂದೂ ಆಗಿಲ್ಲ ಎಂಬುದಾಗಿ ಮಾಜಿ ಅಧ್ಯಕ್ಷರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT