ನವದೆಹಲಿ: ಪಾಕಿಸ್ತಾನದಲ್ಲಿ ಮೃತಪಟ್ಟ ಹಿಂದೂಗಳ ಚಿತಾಭಸ್ಮವನ್ನು ಹರಿದ್ವಾರದ ಗಂಗಾ ನದಿಯಲ್ಲಿ ವಿಸರ್ಜಿಸಲು ಅವಕಾಶ ಕಲ್ಪಿಸಲಾಗಿದೆ.

ಇದೇ ಮೊದಲ ಬಾರಿಗೆ ಸರ್ಕಾರ, ಮೃತರ ಸಂಬಂಧಿ, ಚಿತಾಭಸ್ಮದೊಂದಿಗೆ ಭಾರತಕ್ಕೆ ಬಂದು, ಗಂಗಾನದಿಯಲ್ಲಿ ಅದನ್ನು ವಿಸರ್ಜಿಸಿ, ಅಂತಿಮ ವಿಧಿ ವಿಧಾನ ಕಾರ್ಯ ಕೈಗೊಳ್ಳಲು ಅನುವು ಮಾಡಿಕೊಟ್ಟಿದೆ.

ಈಗಾಗಲೇ ಮೃತಪಟ್ಟಿರುವ 426 ಹಿಂದೂಗಳ ಚಿತಾಭಸ್ಮವನ್ನು ಪಾಕಿಸ್ತಾನದ ಸ್ಮಶಾನ ಮತ್ತು ಮಂದಿರಗಳಲ್ಲಿ ಇರಿಸಲಾಗಿದೆ. ಅವುಗಳನ್ನು ಸಂಬಂಧಿಕರು ಭಾರತಕ್ಕೆ ತಂದು ಗಂಗೆಯಲ್ಲಿ ವಿಸರ್ಜಿಸುವರು.

ಅದಕ್ಕಾಗಿ, ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಭಾರತದ ವೀಸಾ ಲಭ್ಯವಾಗಲಿದೆ. ಸರ್ಕಾರದ ಈ ನಡೆಯಿಂದ ಉಭಯ ರಾಷ್ಟ್ರಗಳ ನಡುವಣ ರಾಜತಾಂತ್ರಿಕ ಸಂಬಂಧ ವೃದ್ಧಿಗೂ ಸಹಕಾರಿಯಾಗಲಿದೆ ಎಂದು ‘ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್‘ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.