ಜಿನಿವಾ (ಎಪಿ):ಕಳೆದ ಐದು ವರ್ಷಗಳಲ್ಲಿ ದಿನಕ್ಕೆ ಕನಿಷ್ಠ ಒಂದರಂತೆ ವಲಸಿಗ ಮಗು ಸಾವನ್ನಪ್ಪುತ್ತಿದೆ ಅಥವಾ ನಾಪತ್ತೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ವಲಸಿಗರ ಶಾಖೆ ತಿಳಿಸಿದೆ.

ಮೆಡಿಟರೇನಿಯನ್ ಸಮುದ್ರ ಅಥವಾ ಅಮೆರಿಕ– ಮೆಕ್ಸಿಕೊ ಗಡಿಯನ್ನು ಅಕ್ರಮವಾಗಿ ದಾಟಲು ಪ್ರಯತ್ನಿಸುವವರ ಸಾವಿನ ಪ್ರಮಾಣ ಏರುತ್ತಲೇ ಇವೆ ಎಂದು ಈ ವರದಿ ತಿಳಿಸಿದೆ.

2014ರಿಂದ ಇಲ್ಲಿಯವರೆಗೆ ಅಕ್ರಮವಾಗಿ ಗಟಿ ದಾಟಲು ಪ್ರಯತ್ನಿಸಿದವರಲ್ಲಿ 32 ಸಾವಿರ ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಪೋಷಕರ ಜೊತೆಗೆ ತೆರಳುತ್ತಿದ್ದ 1,600 ಮಕ್ಕಳು ಸೇರಿದ್ದು, ಬಹುತೇಕ 6 ತಿಂಗಳ ಹಸುಗೂಸುಗಳು ಎಂದುಅಂತರರಾಷ್ಟ್ರೀಯ ವಲಸಿಗರ ಸಂಘಟನೆ (ಐಒಎಂ) ತಿಳಿಸಿದೆ.

ಮೆಡಿಟರೇನಿಯನ್ ಅತ್ಯಂತ ಮಾರಣಾಂತಿಕ ಪ್ರದೇಶವಾಗಿದ್ದು, ಇಲ್ಲಿಯೇ 17,900 ಮಂದಿ ಮೃತಪಟ್ಟಿದ್ದಾರೆ.ಲಿಬಿಯಾದಿಂದ ಇಟಲಿಗೆ ಅಕ್ರಮ ವಲಸೆ ಹೋಗುವ ಸಂದರ್ಭದಲ್ಲಿಯೇ ಹೆಚ್ಚಾಗಿ ಈ ಅಪಘಡ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.