ಅಬುಜಾ: ‘ಕಾನೂನು ವಿರೋಧಿಯಾದ ಸಲಿಂಗ ವಿವಾಹ ಆಚರಣೆಯಲ್ಲಿ ಭಾಗಿಯಾಗಿದ್ದ 67 ಮಂದಿಯನ್ನು ಬಂಧಿಸಲಾಗಿದೆ’ ಎಂದು ನೈಜೀರಿಯಾ ಪೊಲೀಸರು ಮಂಗಳವಾರ ಹೇಳಿದ್ದಾರೆ.

‘ದಕ್ಷಿಣ ಡೆಲ್ಟಾ ರಾಜ್ಯದ ಎಕ್ಪಾನ್ ಪಟ್ಟಣದಲ್ಲಿ ಸಲಿಂಗ ವಿವಾಹದಲ್ಲಿ ಭಾಗಿಯಾಗಿದ್ದ ‘ಶಂಕಿತ ಸಲಿಂಗಿಗಳನ್ನು’ ಸೋಮವಾರ ಸುಮಾರು 2 ಗಂಟೆಗೆ ಬಂಧಿಸಲಾಯಿತು. ಬಂಧಿತರ ಪೈಕಿ ಇಬ್ಬರು ವಿವಾಹವಾಗಿದ್ದಾರೆ’ ಎಂದು ರಾಜ್ಯ ಪೊಲೀಸ್ ವಕ್ತಾರ ಬ್ರೈಟ್ ಎಡಾಫೆ ಸುದ್ದಿಗಾರರಿಗೆ ತಿಳಿಸಿದರು.

ಆಫ್ರಿಕಾದಲ್ಲಿ ಸಲಿಂಗ ವಿವಾಹವು ಕಾನೂನುಬಾಹಿರವಾಗಿದೆ. ಸಲಿಂಗ ವಿವಾಹ ತಡೆ ಕಾಯ್ದೆಯನ್ನು ರೂಪಿಸಲಾಗಿದ್ದು, ಸಲಿಂಗಿಗಳಿಗೆ 10 ವರ್ಷದವರೆಗೂ ಶಿಕ್ಷೆ ವಿಧಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.