ಮಾಸ್ಕೊ: ರಷ್ಯಾದ ವಿರೋಧ ಪಕ್ಷದ ನಾಯಕ, ಬಂಧಿತ ಅಲೆಕ್ಸಿ ನವಾಲ್ನಿ ಅವರನ್ನು ಮಾಸ್ಕೊ ಸಮೀಪದ ಕಾರಾಗೃಹದಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಅವರ ವಕ್ತಾರ ಶುಕ್ರವಾರ ಆರೋಪಿಸಿದ್ದಾರೆ.

‘ಅಲೆಕ್ಸಿ ಅವರನ್ನು ಡಿ.11ರಂದು ಇಲ್ಲಿನ ವ್ಲಾಡಿಮಿರ್ ಕಾರಾಗೃಹದಿಂದ ಬೇರೆಡೆಗೆ ಕರೆದೊಯ್ಯಲಾಗಿದೆ. ಎಲ್ಲಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿಲ್ಲ. ವಕೀಲರು ಡಿ.6ರಿಂದಲೂ ಅಲೆಕ್ಸಿ ಅವರನ್ನು ನೋಡಿಲ್ಲ. ಅಲೆಕ್ಸಿ ಅವರು ಅದೇ ಕಾರಾಗೃಹದಲ್ಲಿ ಇದ್ದಿದ್ದರೆ, ಭೇಟಿಯಾಗಲು ಏಕೆ ಅವಕಾಶ ನೀಡುತ್ತಿಲ್ಲ’ ಎಂದು ಅಲೆಕ್ಸಿ ಬೆಂಬಲಿಗರಾದ ಕಿರಾ ಯಾರ್ಮಿಶ್ ಹೇಳಿದರು.

ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾದ ಪ್ರಕರಣದಲ್ಲಿ ಅಲೆಕ್ಸಿ ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ನಿಷೇಧಿತ ರಾಜಕೀಯ ಸಂಸ್ಥೆಗಳಿಗೆ ನೀಡಲಾದ 4.7 ದಶ ಲಕ್ಷ ಡಾಲರ್ ಹಣವನ್ನು ದೋಚಿರುವ ಆರೋಪ ನವಾಲ್ನಿ ಮೇಲಿತ್ತು. ಜತೆಗೆ ಜೈಲಿನಲ್ಲಿರುವಾಗ ವಿಷ ವುಣಿಸಿ ಕೊಲ್ಲಲು ಪುಟಿನ್ ಕಡೆಯಿಂದ ಪ್ರಯತ್ನ ನಡೆದಿತ್ತು ಎಂದು ನವಾಲ್ನಿ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.