ಜೋಹಾನ್ಸ್‌ಬರ್ಗ್: ನೆಲ್ಸನ್ ಮಂಡೇಲಾ ಫೌಂಡೇಷನ್ (ಎನ್‌ಎಂಎಫ್) ಮಂಡಳಿ, ತನ್ನ ಸಿಇಒ ಸೆಲ್ಲೊ ಹಟಾಂಗ್ (Sello Hatang) ಅವರನ್ನು ಸೇವೆಯಿಂದ ವಜಾಗೊಳಿದೆ. ಕೆಲವು ಉದ್ಯೋಗಿಗಳು ನೀಡಿದ ದೂರಿನ ತನಿಖೆಯ ನಂತರ ಈ ಕ್ರಮ ಕೈಗೊಂಡಿದೆ.

‘ನಮ್ಮನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ. ಸ್ವೀಕಾರಾರ್ಹವಲ್ಲದ ವರ್ತನೆ ತೋರುತ್ತಾರೆ’ ಎಂದು ಉದ್ಯೋಗಿಗಳು ಸಿಇಒ ವಿರುದ್ಧ ಮಂಡಳಿಗೆ ಹಿಂದಿನ ತಿಂಗಳು ದೂರು ನೀಡಿದ್ದರು.

ದೂರು ದಾಖಲಾದ ಬೆನ್ನಿಗೆ ಸಿಇಒ ರಾಜೀನಾಮೆಯನ್ನು ಪಡೆದು ವಿಶೇಷ ರಜೆ ಮಂಜೂರು ಮಾಡಿದ್ದ ಮಂಡಳಿ, ತನಿಖೆಗಾಗಿ ಸ್ವತಂತ್ರ ಸಮಿತಿ ರಚಿಸಿತ್ತು. ಇದೀಗ ಹಟಾಂಗ್ ವಜಾಗೊಳಿಸಿರುವ ಪ್ರಕಟಣೆಯನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ ಬೇರೆ ಯಾವ ಮಾಹಿತಿಯನ್ನು ನೀಡಿಲ್ಲ.

ಶೀಘ್ರದಲ್ಲೇ ಹೊಸ ಸಿಇಒ ನೇಮಕ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ. ನೆಲ್ಸನ್ ಮಂಡೇಲಾ ಸ್ಥಾಪಿಸಿದ ಈ ಮಂಡಳಿಗೆ ಭಾರತ ಸರ್ಕಾರವೂ ಸಹಕಾರ ಒದಗಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.