ಜೊಹಾನ್ಸ್‌ಬರ್ಗ್: ನೆಲ್ಸನ್ ಮಂಡೇಲಾ ಅವರ ವೈಯಕ್ತಿಕ ವೈದ್ಯರಾಗಿದ್ದಭಾರತ ಮೂಲದ ವೆಜಯ್ ರಾಮ್ ಲಖನ್(62) ಅವರು ಹೃದಯಾಘಾತದಿಂದ ನಿಧರಾಗಿದ್ದಾರೆ.

ನೆಲ್ಸನ್ ಮಂಡೇಲಾ ಅವರ ಕೊನೆ ದಿನಗಳವರೆಗೂ ಅವರ ವೈಯಕ್ತಿಕ ವೈದ್ಯರಾಗಿವೆಜಯ್ ಕಾರ್ಯನಿರ್ವಹಿಸಿದ್ದರು.

ವೆಜಯ್ ರಾಮ್ ಲಖನ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನಡೆಸಬೇಕು ಎಂದು ವೆಜಯ್ ಅವರ ಮಾಜಿ ಸಹೊದ್ಯೋಗಿ ಉಮ್‌ಖೊಂಟೊ ವೆ ಸಿಜ್ವೆ ಅವರು ಆಗ್ರಹಿಸಿದ್ದಾರೆ. ಹಾಗಾಗಿ ವೆಜಯನ್ ಅವರ ಅಂತ್ಯಕ್ರಿಯೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

1980 ರಲ್ಲಿ ನಡೆದ ವರ್ಣಭೇದ ವಿಮೋಚನಾ ಹೋರಾಟದದಲ್ಲಿ ರಾಮ್ ಲಖನ್ ಅವರು ಕೂಡ ಭಾಗಿಯಾಗಿದ್ದರು. ಅವರು ಡರ್ಬಾನ್ ಪ್ರಾಂತ್ಯದಲ್ಲಿ ಜನರನ್ನು ಒಗ್ಗೂಡಿಸಿ, ಯಶಸ್ವಿಯಾಗಿ ಸಂಘಟಿಸಿದ್ದರು.

2013ರ ಡಿಸೆಂಬರ್ 5ರಂದು ನೆಲ್ಸನ್ ಮಂಡೇಲಾ ಅವರು ಜೋಹನ್ಸ್‌ಬರ್ಗ್‌ನಲ್ಲಿ ಕೊನೆಯುಸಿರೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.