ಕಠ್ಮಂಡು: ಏಷ್ಯಾದ್ಯಂತ 1970ರಲ್ಲಿ ನಡುಕ ಹುಟ್ಟಿಸಿದ್ದ ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌ನನ್ನು ಬಿಡುಗಡೆ ಮಾಡುವಂತೆ ನೇಪಾಳದ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.

ಇಬ್ಬರು ಉತ್ತರ ಅಮೆರಿಕ ಪ್ರವಾಸಿಗರನ್ನು ಹತ್ಯೆ ಮಾಡಿದ ಆರೋಪದಲ್ಲಿ 2003ರಿಂದ ಈತ ಇಲ್ಲಿನ ಜೈಲಿನಲ್ಲಿ ಇದ್ದ. ಅನಾರೋಗ್ಯ ಹಿನ್ನೆಲೆಯಲ್ಲಿ ಆತನ ಬಿಡುಗಡೆಗೆ ನ್ಯಾಯಾಲಯ ಇದೀಗ ಆದೇಶ ನೀಡಿದೆ.

ಶೋಭರಾಜ್‌ಗೆ 78 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಕೋರ್ಟ್ ಬಿಡುಗಡೆಗೆ ಆದೇಶಿಸಿದೆ.

ನಕಲಿ ಪಾಸ್‌ಪಾರ್ಟ್ ಬಳಸಿ ನೇಪಾಳಕ್ಕೆ ಬಂದಿದ್ದ ಶೋಭರಾಜ್1975ರಲ್ಲಿ ಅಮೆರಿಕ ಹಾಗೂ ಕೆನಡಾ ಮೊಲದ ಇಬ್ಬರು ಪ್ರವಾಸಿಗರನ್ನು ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಶೋಭರಾಜ್‌ಗೆ ನೇಪಾಳ ಸುಪ್ರೀಂ ಕೋರ್ಟ್ ದೋಷಿ ಎಂದು ಗುರುತಿಸಿ ಶಿಕ್ಷೆ ವಿಧಿಸಿತ್ತು.

ಹತ್ಯೆ ಮಾಡಿದ್ದಕ್ಕೆ 20 ವರ್ಷ ಜೈಲು ಹಾಗೂ ನಕಲಿ ಪಾಸ್‌ಪೋರ್ಟ್ ಬಳಸಿದ್ದಕ್ಕೆ 1 ವರ್ಷ ಜೈಲು ವಿಧಿಸಿತ್ತು.2003ರಿಂದ ಶೋಭರಾಜ್ ಕಠ್ಮಂಡು ಕೇಂದ್ರ ಕಾರಾಗೃಹದಲ್ಲಿದ್ದಾನೆ.

ಶೋಭರಾಜ್ ಬಿಡುಗಡೆ ಮಾಡಿದ ಬಳಿಕ ಆತನನ್ನು ದೇಶದಿಂದ ಗಡಿಪಾರು ಮಾಡುವಂತೆ ಕೋರ್ಟ್ ನೇಪಾಳ ಸರ್ಕಾರಕ್ಕೆ ಆದೇಶ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.