ಕಠ್ಮಂಡು: ನೇಪಾಳದ ಪ್ರಧಾನಮಂತ್ರಿ ಪುಷ್ಪಕಮಲ್ ದಹಲ್ ಪ್ರಚಂಡ ಅವರು ಇದೇ 20ರಂದು ಸಂಸತ್‌ನಲ್ಲಿ ವಿಶ್ವಾಸಮತ ಸಾಬೀತುಪಡಿಸಬೇಕಾಗಿದೆ. ಪ್ರಚಂಡ ಅವರು ಅಧಿಕಾರ ವಹಿಸಿಕೊಂಡ 18 ತಿಂಗಳಲ್ಲಿ ಇದು ನಾಲ್ಕನೇ ಬಾರಿ ವಿಶ್ವಾಸ ಮತದ ಪರೀಕ್ಷೆ ಎದುರಿಸುತ್ತಿದ್ದಾರೆ.

ಪ್ರಚಂಡ ಅವರು ಪ್ರತಿನಿಧಿಸುವ ನೇಪಾಳದ ಕಮ್ಯುನಿಸ್ಟ್ ಪಕ್ಷವು (ಮಾವೋವಾದಿ ಕೇಂದ್ರ) ದೇಶದ ಸಂಸತ್‌ನಲ್ಲಿ (ಎಚ್‌ಒಆರ್) ಮೂರನೇ ಅತಿ ದೊಡ್ಡ ಪಕ್ಷವಾಗಿದೆ.

ಉಪೇಂದ್ರ ಯಾದವ್ ನೇತೃತ್ವದ ಜನತಾ ಸಮಾಜವಾದಿ ಪಕ್ಷವು (ಜೆಎಸ್‌ಪಿ) ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಮೇ 13ರಂದು ಹಿಂಪಡೆದಿದೆ. ಯಾದವ್ ಅವರು ಉಪ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಪಕ್ಷವು ಸರ್ಕಾರದಿಂದ ಹೊರಬಂದಿದೆ. ಜತೆಗೆ, ಗೃಹ ಸಚಿವ ರಬಿ ಲಾಮಿಚಾನೆ ಸಹಕಾರಿ ನಿಧಿಯ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ತನಿಖೆಯ ಕುರಿತು ಸದನದಲ್ಲಿ ಸಂಸದರು ಧ್ವನಿ ಎತ್ತಿರುವಾಗ ಪ್ರಧಾನಿ ಪ್ರಚಂಡ ಅವರು ವಿಶ್ವಾಸಮತ ಸಾಬೀತುಪಡಿಸಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಪ್ರಧಾನಿ ಪ್ರತಿನಿಧಿಸುವ ಪಕ್ಷ ಒಡೆದರೆ ಅಥವಾ ಸಮ್ಮಿಶ್ರ ಸರ್ಕಾರದ ಸದಸ್ಯರು ಬೆಂಬಲ ಹಿಂತೆಗೆದುಕೊಂಡರೆ 30 ದಿನಗಳೊಳಗೆ ಪ್ರಧಾನಿ ವಿಶ್ವಾಸ ಮತವನ್ನು ಸಾಬೀತುಪಡಿಸಬೇಕಾಗುತ್ತದೆ. ಸಮ್ಮಿಶ್ರ ಸರ್ಕಾರವನ್ನು ತ್ಯಜಿಸುವ ಸಂದರ್ಭದಲ್ಲಿ ಜನತಾ ಸಮಾಜಬಾದಿ ಪಕ್ಷ (ಜೆಎಸ್‌ಪಿ) ಕಳೆದ ವಾರ ತನ್ನ ಬೆಂಬಲ ಹಿಂಪಡೆದಿತ್ತು. ಪ್ರಧಾನಿ ಪ್ರಚಂಡ ಅವರು 2022ರ ಡಿಸೆಂಬರ್ 25ರಂದು ಅಧಿಕಾರ ವಹಿಸಿಕೊಂಡ ನಂತರ, ಒಂದೂವರೆ ವರ್ಷಗಳಲ್ಲಿ ನಾಲ್ಕನೇ ಬಾರಿಗೆ ವಿಶ್ವಾಸ ಮತ ಯಾಚಿಸುತ್ತಿದ್ದಾರೆ. ಮಾರ್ಚ್ 13ರಂದು ಪ್ರಚಂಡ ಅವರು ಮೂರನೇ ಬಾರಿಗೆ ವಿಶ್ವಾಸ ಮತ ಸಾಬೀತುಪಡಿಸಿದ್ದರು.

ಸತತ ನಡೆಯುತ್ತಿರುವ ವಿಶ್ವಾಸ ಮತಯಾಚನೆಯಲ್ಲಿ ಪ್ರಚಂಡ ಅವರಿಗೆ ಬೆಂಬಲ ಗಮನಾರ್ಹವಾಗಿ ಕುಸಿದಿದೆ. 2023ರ ಜನವರಿಯಲ್ಲಿ ವಿಶ್ವಾಸಮತ ಕೋರಿದಾಗ 268 ಮತಗಳ ಬೆಂಬಲ ಸಿಕ್ಕಿತ್ತು. ನಂತರ ಅದೇ ವರ್ಷದ ಮಾರ್ಚ್‌ನಲ್ಲಿ ವಿಶ್ವಾಸ ಮತಯಾಚಿಸಿದಾಗ ಬೆಂಬಲದ ಮತಗಳ ಸಂಖ್ಯೆ 172ಕ್ಕೆ ಇಳಿಯಿತು. ಮೂರನೇ ಬಾರಿಗೆ ಕೋರಿದ ವಿಶ್ವಾಸಮತದ ವೇಳೆ ಬೆಂಬಲವು 157 ಮತಗಳಿಗೆ ಕುಸಿದಿದೆ.

275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ವಿಶ್ವಾಸ ಮತವನ್ನು ಗೆಲ್ಲಲು ಹೊಸ ಸರ್ಕಾರಕ್ಕೆ ಕನಿಷ್ಠ 138 ಮತಗಳ ಬೆಂಬಲದ ಅಗತ್ಯವಿದೆ. ಸದ್ಯ, ಆಡಳಿತಾರೂಢ ಮೈತ್ರಿಕೂಟವು ಸಿಪಿಎನ್-ಯುಎಂಎಲ್ 77 ಸ್ಥಾನ, ಮಾವೋವಾದಿ ಕೇಂದ್ರದ 32, ರಾಷ್ಟ್ರೀಯ ಸ್ವತಂತ್ರ ಪಕ್ಷದ 21, ಹೊಸದಾಗಿ ರಚಿಸಲಾದ ಜನತಾ ಸಮಾಜಬಾದಿ ಪಕ್ಷದ 7 ಮತ್ತು ಸಿಪಿಎನ್–ಯು 10 ಸ್ಥಾನಗಳ ಬೆಂಬಲವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.