ಸೋಲ್ (ದಕ್ಷಿಣ ಕೊರಿಯಾ): ಅಮೆರಿಕ- ದಕ್ಷಿಣ ಕೊರಿಯಾ ಭದ್ರತಾ ಮಾತುಕತೆ ನಡೆಸಿದ ಮರುದಿನವೇ ಉತ್ತರ ಕೊರಿಯಾ ಬುಧವಾರ ಪೂರ್ವ ಸಮುದ್ರಕ್ಕೆ ಎರಡು ಅಲ್ಪ-ಶ್ರೇಣಿಯ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಯೋನ್ಹಾಪ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್ಯಾಂಗ್ ಬಳಿಯ ಸುನಾನ್ನಿಂದ ಬೆಳಿಗ್ಗೆ 3:30, 3:46ಕ್ಕೆ ಕ್ಷಿಪಣಿ ಉಡಾಯಿಸಲಾಗಿದೆ. ಉಡಾವಣೆಗೊಂಡ ರಾಕೆಟ್ಗಳ ಬಗ್ಗೆ ದಕ್ಷಿಣ ಕೊರಿಯಾದ ರಕ್ಷಣಾ ಅಧಿಕಾರಿಗಳು ಹೆಚ್ಚಿನ ವಿವರ ನೀಡಿಲ್ಲ.

ಉತ್ತರ ಕೊರಿಯಾ ನಡೆಯನ್ನು ತೀವ್ರವಾಗಿ ಖಂಡಿಸಿರುವ ದಕ್ಷಿಣ ಕೊರಿಯಾ, ‘ಇದು ಪ್ರಚೋದನೆಯ ಕೃತ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಶಾಂತಿ ಕದಡುವುದರ ಜತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ಹೊರಹಾಕಿದೆ.

ಉತ್ತರ ಕೊರಿಯಾದ ಯಾವುದೇ ಪ್ರಚೋದನೆಗಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ನಮ್ಮ ಸೇನೆ ಹೊಂದಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಮೇ 31ರಂದು ನಡೆದ ಉತ್ತರ ಕೊರಿಯಾದ ಮೊದಲ ಬೇಹುಗಾರಿಕಾ ಉಪಗ್ರಹ ಉಡಾವಣೆ ವಿಫಲವಾಗಿತ್ತು. ಉಪಗ್ರಹವನ್ನು ಬಾಹ್ಯಾಕಾಶ ಕಕ್ಷೆಗೆ ಕೊಂಡೊಯ್ಯುವಲ್ಲಿ ರಾಕೆಟ್ ವಿಫಲವಾಗಿ ಸಮುದ್ರಕ್ಕೆ ಬಿದ್ದಿತ್ತು.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜತೆಗೆ ಸೇನಾ ಸಂಘರ್ಷಕ್ಕಿಳಿದು, ಉದ್ವಿಗ್ನ ಪರಿಸ್ಥಿತಿ ನೆಲೆಸಿರುವಾಗ, ಸೇನಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಹೊರಟಿದ್ದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಇದರಿಂದ ತೀವ್ರ ಹಿನ್ನಡೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.