ಢಾಕಾ: ಬಾಂಗ್ಲಾದೇಶದ ಪ್ರಜೆಗಳ ಮೇಲೆಎನ್ಆರ್ಸಿ ಪರಿಣಾಮ ಬೀರುವುದಿಲ್ಲ. ಎನ್ಆರ್ಸಿ ಪ್ರಕ್ರಿಯೆ ಸಂಪೂರ್ಣ ಆಂತರಿಕ ವಿಷಯ ಎಂದುಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ಭರವಸೆ ನೀಡಿದ್ದಾರೆ.

ಸೋಮವಾರ ಢಾಕಾದಲ್ಲಿ ನಡೆದ ‘ಬಾಂಗ್ಲಾದೇಶ ಮತ್ತು ಭಾರತ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈವರೆಗೆ ಭಾರತ–ಬಾಂಗ್ಲಾದೇಶದ ಗಡಿ ವಿವಾದ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಪ್ರಬುದ್ಧತೆ, ಸೌಜನ್ಯತೆಯಿಂದ ಬಗೆಹರಿಸಿಕೊಳ್ಳಲಾಗುತ್ತಿದೆ ಎಂದರು.

ಎನ್ಆರ್ಸಿ ಆಂತರಿಕ ವಿಷಯ ಎಂದು ಬಾಂಗ್ಲಾದೇಶಕ್ಕೆ ಭಾರತ ಭರವಸೆ ನೀಡಿದ್ದರೂ, ಎನ್ಆರ್ಸಿ ಬಗ್ಗೆ ಬಾಂಗ್ಲಾದೇಶ ಅಸಮಾಧಾನ ವ್ಯಕ್ತಪಡಿಸಿತ್ತು. ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ ಅಬ್ದುಲ್ ಮೊಮೆನ್ ಹಾಗೂ ಗೃಹ ಸಚಿವ ಅಸಾದುಜ್ಜಾಮಾನ್ಖಾನ್ ಅವರು ಡಿಸೆಂಬರ್ನಲ್ಲಿ ಭಾರತದ ಭೇಟಿಯನ್ನು ರದ್ದುಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.