ಸೋಲ್: ಹೆಚ್ಚಿನ ವೇತನ, ಕಡಿಮೆ ಕೆಲಸದ ಸಮಯ ಮತ್ತು ಇತರೆ ಸೌಲಭ್ಯಕ್ಕಾಗಿ ಒತ್ತಾಯಿಸಿ ವಿಶ್ವದಾದ್ಯಂತ ಕಾರ್ಮಿಕರು ಮತ್ತು ಹೋರಾಟಗಾರರು ಸೋಮವಾರ ರ್ಯಾಲಿ ನಡೆಸುವುದರೊಂದಿಗೆ ಮೇ ದಿನ ಆಚರಿಸಿದರು.

ಫ್ರಾನ್ಸ್ನಲ್ಲಿ ನಿವೃತ್ತಿ ವಯಸ್ಸನ್ನು 62 ರಿಂದ 64 ಕ್ಕೆ ಹೆಚ್ಚಿಸುವ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಅವರ ಇತ್ತೀಚಿನ ಕ್ರಮವನ್ನು ವಿರೋಧಿಸಿ ಒಕ್ಕೂಟಗಳು ಬೃಹತ್ ಪ್ರದರ್ಶನಗಳನ್ನು ಯೋಜಿಸಿವೆ.

ನೂತನ ಪಿಂಚಣಿ ಯೋಜನೆಯು ಕಾರ್ಮಿಕ ವಿರೋಧಿಯಾಗಿದೆ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಹಾಳುಗೆಡವುತ್ತದೆ ಎಂಬುದು ಪ್ರತಿಭಟನಕಾರರ ಆಕ್ಷೇಪ.

ಮೇ 1 ರಂದು ಅನೇಕ ದೇಶಗಳಲ್ಲಿ ರ್ಯಾಲಿ, ಮೆರವಣಿಗೆ ಮತ್ತು ಇತರ ಕಾರ್ಯಕ್ರಮಗಳೊಂದಿಗೆ ಕಾರ್ಮಿಕರ ಹಕ್ಕುಗಳ ದಿನವಾಗಿ ಆಚರಿಸಲಾಗುತ್ತದೆ. ಕೋವಿಡ್ -19 ನಿರ್ಬಂಧ ಸಡಿಲಿಸಿದ್ದ ಪರಿಣಾಮ ಈ ವರ್ಷ ಹೆಚ್ಚಿನ ಕಾರ್ಯಕ್ರಮಗಳು ನಡೆದಿವೆ ಮತ್ತು ಕಾರ್ಮಿಕರ ಜೀವನ ಮಟ್ಟ ಸುಧಾರಿಸಲು ಸರ್ಕಾರಗಳು ಹೆಚ್ಚಿನದನ್ನು ಮಾಡಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

ಹಿಂದಿನ ವರ್ಷಗಳಂತೆ, ಟರ್ಕಿಯಲ್ಲಿ ಪೊಲೀಸರು ಪ್ರತಿಭಟನಾಕಾರರ ಗುಂಪನ್ನು ಇಸ್ತಾಂಬುಲ್ನ ಮುಖ್ಯ ಚೌಕವಾದ ತಕ್ಸಿಮ್ ತಲುಪದಂತೆ ತಡೆದರು. ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡರು ಎಂದು ಸ್ವತಂತ್ರ ದೂರದರ್ಶನ ಕೇಂದ್ರ ಸೋಜ್ಕು ವರದಿ ಮಾಡಿದೆ.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.