ಬಮಾಕೊ (ರಾಯಿಟರ್ಸ್): ಮಾಲಿಯ ಹಂಗಾಮಿ ಅಧ್ಯಕ್ಷ ಮತ್ತು ಪ್ರಧಾನಿಯನ್ನು ದಂಗೆಕೋರ ಮಿಲಿಟರಿ ಪಡೆಯು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ. ಒಂಭತ್ತು ತಿಂಗಳ ಹಿಂದೆ ನಡೆದ ದಂಗೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಿದ್ದ ಸೇನೆಯು ಇಬ್ಬರು ಸದಸ್ಯರನ್ನು ಸರ್ಕಾರದ ಪುನರ್ರಚನೆ ವೇಳೆ ಕೈಬಿಟ್ಟ ಕೆಲವೇ ಗಂಟೆಗಳಲ್ಲಿ ಬಂಧಿಸಿ ಮೂರು ದಿನಗಳ ಕಾಲ ತನ್ನ ವಶದಲ್ಲಿರಿಸಿಕೊಂಡಿತ್ತು.

ಹಂಗಾಮಿ ಅಧ್ಯಕ್ಷ ಬಹ್ ಎನ್ಡಾವ್ ಮತ್ತು ಪ್ರಧಾನಿ ಮೊಕ್ಚರ್ ಓವಾನೆ ಅವರನ್ನು ಸೋಮವಾರ ಬಂಧಿಸಿ ಕಾಟೆಯ ಮಿಲಿಟರಿ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿತ್ತು.

’ಹಂಗಾಮಿ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಬುಧವಾರ ತಡರಾತ್ರಿ ಬಿಡುಗಡೆ ಮಾಡಲಾಗಿದೆ. ನಮ್ಮ ಮಾತಿಗೆ ನಾವು ಬದ್ಧರಾಗಿದ್ದೇವೆ‘ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದರು.

ಉಪಾಧ್ಯಕ್ಷ ಅಸ್ಸಿಮಿ ಗೊಯ್ಟಾ ಬುಧವಾರ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಮಾಲಿಯಲ್ಲಿ ಮಿಲಿಟರಿ ದಂಗೆ: ಅಧ್ಯಕ್ಷ, ಪ್ರಧಾನಿ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.