ವಾಷಿಂಗ್ಟನ್: ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ವ್ಯವಸ್ಥೆಯಲ್ಲಿ ಬುಧವಾರ ಭಾರಿ ಪ್ರಮಾಣದ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ದೇಶಿಯ 5,400 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿದೆ.

ಇದೊಂದು ಸೈಬರ್ ದಾಳಿಯೇ ಎಂಬ ಅನುಮಾನಗಳು ಬಲವಾಗಿ ಮೂಡಿದ್ದು, ಇಂತಹ ದೊಡ್ಡ ಸಮಸ್ಯೆಗೆ ನಿಖರ ಕಾರಣ ಏನು? ಎಂಬುದು ಇದುವರೆಗೆ ತಿಳಿದು ಬಂದಿಲ್ಲ. ಇದರಿಂದ ಅನೇಕ ವಿಮಾನಗಳನ್ನು ರದ್ದುಗೊಳಿಸಿದರೆ, ಹಲವು ವಿಮಾನಗಳ ಹಾರಾಟವನ್ನು ವಿಳಂಬಗೊಳಿಸಲಾಯಿತು.

‘ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಏರ್‌ಮಿಷನ್ ಸಿಸ್ಟಮ್‌ನ ಸಮಸ್ಯೆಗಳಿಂದಾಗಿ ಪೈಲಟ್ ಮತ್ತು ಇತರ ಸಿಬ್ಬಂದಿಗೆ ಮಾಹಿತಿ ನೀಡುವುದಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಹಲವು ವಿಮಾನಗಳ ಹಾರಾಟ ರದ್ದುಪಡಿಸಲಾಯಿತು. ಆದರೆ, ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ’ ಎಂದು ಎಫ್‌ಎಎ ಪ್ರಕಟಣೆ ತಿಳಿಸಿದೆ.

ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಉಂಟಾದ ಸಮಸ್ಯೆಯನ್ನು ಪುನರ್ ಸ್ಥಾಪಿಸಲಾಗಿದ್ದು, ವಿಮಾನಗಳ ಹಾರಾಟ ಕ್ರಮೇಣ ಆರಂಭವಾಗುತ್ತಿದೆ ಎಂದು ಎಫ್‌ಎಎ ತಿಳಿಸಿದೆ.

ಅನೇಕ ಪ್ರಯಾಣಿಕರು ಈ ಘಟನೆಯನ್ನು ‘ಶಾಕಿಂಗ್’ ಎಂದು ಸಾಮಾಜಿಕ ತಾಣಗಳಲ್ಲಿ ಹೇಳಿಕೊಂಡಿದ್ದಾರೆ.

ಸೈಬರ್ ದಾಳಿ?

‘ಸೈಬರ್ ದಾಳಿಯ ಯಾವುದೇ ಪುರಾವೆಗಳಿಲ್ಲ, ಆದರೆ ಕಾರಣಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಅಧ್ಯಕ್ಷ ಜೋ ಬೈಡನ್ ಅವರು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿದ್ದಾರೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಟ್ವೀಟ್ ಮಾಡಿದ್ದಾರೆ.

ಗರ್ಭಿಣಿಯಾದ ಖ್ಯಾತ ಟೆನಿಸ್ ತಾರೆ ನವೊಮಿ ಒಸಾಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.