ಆಫ್ರಿಕಾ: ಸೆನೆಗಲ್ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಅಟ್ಲಾಂಟಿಕ್ ಮಹಾಸಾಗರದ ಕೇಪ್ ವರ್ಡೆ ದ್ವೀಪದಲ್ಲಿ ಮಗುಚಿದ್ದು, 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

‘101 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಈ ದೋಣಿ ಜುಲೈ 10ರಂದು ಸೆನೆಗಲ್ನಿಂದ ಹೊರಟಿದ್ದು, ಮಂಗಳವಾರ ಕೇಪ್ ವರ್ಡೆ ದ್ವೀಪದಲ್ಲಿ ಮಗುಚಿದೆ. ಇಲ್ಲಿಯವರಗೆ 38 ಜನರನ್ನು ರಕ್ಷಿಸಲಾಗಿದೆ. ರಕ್ಷಿತ ವಲಸಿಗರನ್ನು ಸೆನೆಗಲ್ಗೆ ಕರತರಲಾಗುವುದು’ ಎಂದು ಸೆನೆಗಲ್ನ ವಿದೇಶಾಂಗ ಸಚಿವಾಲಯ ಮಂಗಳವಾರ ತಡರಾತ್ರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಅಟ್ಲಾಂಟಿಕ್ ಸಮುದ್ರದ ಈ ಮಾರ್ಗವು ವಿಶ್ವದಲ್ಲಿಯೇ ಅತಿ ಅಪಾಯಕಾರಿಯಾದ ಮಾರ್ಗವಾಗಿದೆ. ಆಫ್ರಿಕನ್ ವಲಸಿಗರು ಕ್ಯಾನರಿ ದ್ವೀಪಗಳ ಮೂಲಕ ಸ್ಪೇನ್ಗೆ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಕಳ್ಳಸಾಗಣೆದಾರರು ಹೆಚ್ಚಾಗಿ ಈ ಮಾರ್ಗವನ್ನು ಬಳಸುತ್ತಿದ್ದು, ವಲಸೆ ಕಾರ್ಮಿಕರಿಗೆ ಸುರಕ್ಷಿತ ಮಾರ್ಗವೊಂದು ಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ‘ ಎಂದು ಐಓಎಮ್ (ಇಂಟರ್ನ್ಯಾಷನಲ್ ಆರ್ಗನೈಸೇಷನ್ ಫಾರ್ ಮೈಗ್ರೇಷನ್) ವಕ್ತಾರ ಸಫಾ ಮೆಸೆಹ್ಲಿ ತಿಳಿಸಿದರು.

ಓದಿ: 3 ದೋಣಿಗಳಲ್ಲಿ ತೆರಳುತ್ತಿದ್ದ 300 ವಲಸಿಗರು ನಾಪತ್ತೆ

‘2022ರಲ್ಲಿ ಕ್ಯಾನರಿ ದ್ವೀಪ ಮಾರ್ಗದಲ್ಲಿ ಸುಮಾರು 559 ವಲಸಿಗರು ಸಾವನ್ನಪ್ಪಿದ್ದಾರೆ. ಈ ವರ್ಷದ ಮೊದಲಾರ್ಧದಲ್ಲಿ ಸುಮಾರು 126 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಕಾಣೆಯಾಗಿದ್ದಾರೆ. 15 ದೋಣಿಗಳು(ಹಡಗು) ಮುಳುಗಿರುವುದು ದಾಖಲಾಗಿದೆ’ ಎಂದು ಸಫಾ ತಿಳಿಸಿದರು.

ಕಳೆದ ತಿಂಗಳು ಪಶ್ಚಿಮ ಆಫ್ರಿಕಾದ ಸೆನೆಗಲ್ನಿಂದ ಸ್ಪೇನ್ಗೆ ಮೂರು ದೋಣಿಗಳಲ್ಲಿ ತೆರಳುತ್ತಿದ್ದ ಸುಮಾರು 300 ಮಂದಿ ವಲಸಿಗರು ನಾಪತ್ತೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.