ಹ್ಯೂಸ್ಟನ್ (ಪಿಟಿಐ): ಅಮೆರಿಕದ ಓಕ್ಲಹಾಮ್ ಸ್ಟೇಟ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಸುಭಾಷ್ ಕಾಕ್ ಅವರಿಗೆ ಭಾರತದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಕಾನ್ಸುಲ್ ಜನರಲ್ ಡಾ.ಅನೂಪ್ ರಾಯ್ ಮಂಗಳವಾರ ಪ್ರದಾನ ಮಾಡಿದರು.

ಮಾರ್ಚ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಭಾರತಕ್ಕೆ ಬರಲು ಸಾಧ್ಯವಾಗದ ಕಾರಣ ಈಗ ಪ್ರದಾನ ಮಾಡಲಾಗಿದೆ.

‘ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದ್ದು ಇಂತಹ ರಾಷ್ಟ್ರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿ’ ಎಂದು ಸುಭಾಷ್ ಹೇಳಿದರು.

ಶ್ರೀನಗರ ಮೂಲದವರಾದ ಕಾಕ್, ಬಿ.ಇ ನಂತರ ದೆಹಲಿಯ ಐಐಟಿಯಲ್ಲಿ ಪಿಎಚ್.ಡಿ ಪಡೆದರು. ಬಳಿಕ ಲಂಡನ್ನ ಇಂಪೀರಿಯಲ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಆರಂಭಿಸಿದರು. ಮುಂಬೈನ ಟಾಟಾ ಇನ್ಸಿಟಿಟ್ಯೂಟ್ ಸೇರಿದಂತೆ ವಿವಿಧೆಡೆ ಸಂಶೋಧಕರಾಗಿ ಕೆಲಸ ಮಾಡಿದ ಅವರು, 2007ರಲ್ಲಿ ಓಕ್ಲಹಾಮ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.