ಲಾಹೋರ್: 625 ಎಕರೆ ಭೂಮಿ ಖರೀದಿಯ ಭ್ರಷ್ಟಾಚಾರ ಪ್ರಕರಣದ ಸಂಬಂಧ ವಿಚಾರಣೆಗೆ ಜೂನ್ 19ರಂದು ಹಾಜರಾಗಲು ಸೂಚಿಸಿ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಪಡೆಯು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಸಹೋದರಿಗೆ ಸಮನ್ಸ್ ಜಾರಿ ಮಾಡಿದೆ.

ಪಂಜಾಬ್ ಪ್ರಾಂತ್ಯದಲ್ಲಿ ಕೈಗೆಟುಕುವ ಬೆಲೆಯಲ್ಲಿ ಈ ಪ್ರಮಾಣದ ಭೂಮಿ ಖರೀದಿಸುವ ಮೂಲಕ ಇಮ್ರಾನ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಇಮ್ರಾನ್ ಖಾನ್ ಮತ್ತು ಅವರ ಸಹೋದರಿ ಉಜ್ಮಾ ಖಾನ್, ಆಕೆಯ ಪತಿ ಅಜದ್ ಮಜೀದ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮೊದಲು ಜೂನ್ 16ರಂದು ಹಾಜರಾಗಲು ಸೂಚಿಸಿ ಸಮನ್ಸ್ ನೀಡಲಾಗಿತ್ತು. ಇಮ್ರಾನ್ ಹಾಜರಾಗಿರಲಿಲ್ಲ. ಈಗ ಮತ್ತೆ ಸಮನ್ಸ್ ಜಾರಿಯಾಗಿದ್ದು, ಲಾಹೋರ್ನ ಅವರ ನಿವಾಸದ ಬಾಗಿಲಿಗೆ ಅಂಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.