ಲಾಹೋರ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪ್ರಮುಖ ಕಚೇರಿಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದನಾ ಸಂಚು ರೂಪಿಸುತ್ತಿದ್ದ ಮೂವರು ಐಸಿಸ್ ಕಮಾಂಡರ್ ಸೇರಿದಂತೆ 13 ಭಯೋತ್ಪಾದಕರನ್ನು ಪಾಕಿಸ್ತಾನದ ಕಾನೂನು ಜಾರಿ ಸಂಸ್ಥೆ ಬಂಧಿಸುವ ಮೂಲಕ ನಡೆಯಬಹುದಾಗಿದ್ದ ಅವಘಡ ತಪ್ಪಿಸಿದೆ.

ಕಳೆದ ಕೆಲ ದಿನಗಳಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಲಾಹೋರ್, ಬಹವಾಲ್ಪುರ್, ಗುಜ್ರಂವಾಲ, ಮಂಡಿ ಬಹಾವುದ್ದೀನ್, ರಾವಲ್ಪಿಂಡಿ, ಚಿನಿಯೋಟ್, ಕಸೂರ್ ಮತ್ತು ಮುಲ್ತಾನ್ನಲ್ಲಿ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ)ಯ ಪಂಜಾಬ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂಧಿತರು ತೆಹ್ರಿಕ್–ಎ–ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ದಾಯೆಶ್ (ಐಸಿಸ್), ಸಿಪಾಹ್-ಎ-ಸಹಾಬಾ ಪಾಕಿಸ್ತಾನ್ ಮತ್ತು ಅಲ್-ಕೈದಾ ಸಂಘಟನೆಗೆ ಸೇರಿದವರಾಗಿದ್ದು, ಪಂಜಾಬ್ ಪ್ರಾಂತ್ಯದ ಕೆಲ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಯೋಜನೆ ಸಿದ್ಧಪಡಿಸಿದ್ದರು.

ಬಂಧಿತರಿಂದ ಸುಮಾರು 2,360 ಗ್ರಾಂ ಸ್ಫೋಟಕ, ಸಿಡಿಮದ್ದು, 11 ಡಿಟೊನೇಟರ್ಸ್, ಪಿಸ್ತೂಲು ಮತ್ತು ಬುಲೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.