ಕರಾಚಿ: ಪಾಕಿಸ್ತಾನದಲ್ಲಿನ ಸಿಂಧ್ ಪ್ರಾಂತ್ಯದಲ್ಲಿರುವ ದೇವಾಲಯವೊಂದರಲ್ಲಿ ದಾಂದಲೆ ಮಾಡಿದ ಹದಿಹರೆಯ ನಾಲ್ವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಾಲಕರ ವಿರುದ್ಧ ಧರ್ಮನಿಂದೆ ಪ್ರಕರಣ ದಾಖಲಿಸಬೇಕು ಎಂದು ಹಿಂದೂ ಸಚಿವರು ಒತ್ತಾಯಿಸಿದ್ದಾರೆ.

ದೇವಸ್ಥಾನದಿಂದ ಹಣ ಕದಿಯಲು ನಾವು ಈ ರೀತಿ ಮಾಡಿದೆವು ಎಂದು ಬಾಲಕರು ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸಿಂಧ್ ಪ್ರಾಂತ್ಯದ ಥಾರ್ನಲ್ಲಿರುವ ಚಚರೊ ನಗರ ಬಳಿಯಿರುವ ಮಾತಾ ದೇವಲ್ ಭಿಟ್ಟಾನಿದೇವಾಲಯಕ್ಕೆ ನುಗ್ಗಿದ ಬಾಲಕರು ಅಲ್ಲಿದ್ದ ದೇವರಮೂರ್ತಿಗಳನ್ನು ಹಾಳುಗೆಡವಿದ್ದರು. ಈ ಆರೋಪಿಗಳು ಚಚರೊ ನಗರ ನಿವಾಸಿಗಳಾಗಿದ್ದು ಥಾರ್ಪಾಕರ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಅಲ್ಪ ಸಂಖ್ಯಾತರ ವ್ಯವಹಾರಗಳ ಇಲಾಖೆ ಸಚಿವ ಹರಿ ರಾಮ್ ಕಿಶೋರಿ ಲಾಲ್ ಅವರು ಈ ಆರೋಪಿಗಳ ವಿರುದ್ಧ ಧರ್ಮ ನಿಂದೆ ಪ್ರಕರಣ ದಾಖಲಿಸಲು ಒತ್ತಾಯಿಸಿದ್ದಾರೆ. ಅಲ್ಪ ಸಂಖ್ಯಾತರ ಇಲಾಖೆಯ ಮಾಹಿತಿ ಪ್ರಕಾರ ಲಾಲ್ ಅವರೇ ಈ ಬಾಲಕರನ್ನು ಬಂಧಿಸಲು ಪೊಲೀಸರಿಗೆ ಆದೇಶಿಸಿದ್ದರು.

ಚಚರೊ ಶಾಂತಿಯಿಂದ ಕೂಡಿದ ಧರ್ಮ ಸಾಮರಸ್ಯವಿರುವ ಜಾಗವಾಗಿದೆ. ಕೆಲವೊಂದು ದುಷ್ಕರ್ಮಿಗಳು ಕೋಮು ಸೌಹಾರ್ದತೆ ಕೆಡಿಸುವುದಕ್ಕಾಗಿ ಈ ಕೆಲಸ ಮಾಡಿದ್ದಾರೆ. ಈ ಘಟನೆ ಇಡೀ ಹಿಂದೂ ಸಮುದಾಯವನ್ನು ನಡುಗಿಸಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಸಚಿವ ಲಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.