ಪೆಶಾವರ (ಎಎಫ್ಪಿ/ರಾಯಿಟರ್ಸ್): ವಾಯುವ್ಯ ಪಾಕಿಸ್ತಾನದ ನಗರ ಪೆಶಾವರದಲ್ಲಿಯ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯೊಂದರಲ್ಲಿ ಕನಿಷ್ಠ 56 ಜನರು ಮೃತಪಟ್ಟಿದ್ದು, 200 ಜನರು ಗಾಯಗೊಂಡಿದ್ದಾರೆ.

ಪೆಶಾವರದ ಕೊಚಾ ರಿಸಾಲ್ದಾರ್ ಪ್ರದೇಶದಲ್ಲಿಯ ಜಾಮಿಯಾ ಪ್ರದೇಶದಲ್ಲಿ ಪ್ರಾರ್ಥನೆಗೆ ಕೆಲವೇ ಕ್ಷಣಗಳು ಬಾಕಿ ಇದ್ದಾಗ ಬಾಂಬ್ ಸ್ಫೋಟಿಸಿದೆ ಎಂದು ಪ್ರತ್ಯಕ್ಷದರ್ಶಿಜಾಹಿದ್ ಖಾನ್ ಎಂಬುವವರು ಹೇಳಿದರು.

‘ಮಸೀದಿ ಪ್ರವೇಶಿಸುವ ಮೊದಲು ವ್ಯಕ್ತಿಯೊಬ್ಬ ಇಬ್ಬರು ಪೊಲೀಸರಿಗೆ ಗುಂಡು ಹಾರಿಸುತ್ತಿರುವುದು ಕಾಣಿಸಿತು. ಬಳಿಕ ಮಸೀದಿಯೊಳಗೆ ದೊಡ್ಡ ಸದ್ದೊಂದು ಕೇಳಿಸಿತು’ ಎಂದರು.

ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನವೇ ಈ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.