ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಸ್ತ್ರಾಸ್ತ್ರ ಕೊಡಿ: ಅಮೆರಿಕಕ್ಕೆ ಪಾಕಿಸ್ತಾನ ಮನವಿ

Published 29 ಜೂನ್ 2024, 15:41 IST
Last Updated 29 ಜೂನ್ 2024, 15:41 IST
ಅಕ್ಷರ ಗಾತ್ರ

ವಾಷಿಂಗ್ಟನ್/ಇಸ್ಲಾಮಾಬಾದ್: ಪಾಕಿಸ್ತಾನವು ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ಭಯೋತ್ಪಾದನಾ ನಿಗ್ರಹ ಯೋಜನೆಯಾದ ‘ಅಜಮ್‌–ಇ–ಇಶ್ತೆಕಾಮ್’ ಯಶಸ್ಸಿಗಾಗಿ ಸಣ್ಣ ಮತ್ತು ಆಧುನಿಕ ಶಸ್ತಾಸ್ತ್ರಗಳನ್ನು ಪೂರೈಸಬೇಕು ಎಂದು ಪಾಕಿಸ್ತಾನದ ರಾಯಭಾರಿ ಮಸೂದ್ ಖಾನ್ ಅಮೆರಿಕಕ್ಕೆ ಮನವಿ ಮಾಡಿದ್ದಾರೆ. 

‘ದೇಶದಲ್ಲಿನ ಉಗ್ರರ ಜಾಲವನ್ನು ನಿಷ್ಕ್ರಿಯಗೊಳಿಸಲು ಪಾಕಿಸ್ತಾನವು ‘ಅಜಮ್‌–ಇ–ಇಶ್ತೆಕಾಮ್’ ಕಾರ್ಯಾಚರಣೆ ಆರಂಭಿಸಿದ್ದು, ಅದಕ್ಕಾಗಿ ನಮಗೆ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಸಂವಹನ ಸಾಧನಗಳ ಅಗತ್ಯವಿದೆ’ ಎಂದು ಖಾನ್ ಹೇಳಿದ್ದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.

ವಾಷಿಂಗ್ಟನ್‌ನ ವಿಲ್ಸನ್ ಸೆಂಟರ್‌ನಲ್ಲಿ ಕಳೆದ ವಾರ ನಡೆದ ಅಮೆರಿಕದ ನೀತಿ ನಿರೂಪಕರು, ವಿದ್ವಾಂಸರು, ಬೇಹುಗಾರರು ಮತ್ತು ಕಾರ್ಪೊರೇಟ್ ಮುಖಂಡರ ಸಭೆಯಲ್ಲಿ ಅವರು ಈ ರೀತಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT