ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಂಡಮಾರುತ: ಬಾರ್ಬಡೋಸ್‌ನಲ್ಲಿ ಸಿಲುಕಿರುವ ಭಾರತ ಕ್ರಿಕೆಟ್‌ ಆಟಗಾರರು

Published 1 ಜುಲೈ 2024, 15:51 IST
Last Updated 1 ಜುಲೈ 2024, 15:51 IST
ಅಕ್ಷರ ಗಾತ್ರ

ಬ್ರಿಜ್‌ಟೌನ್, ಬಾರ್ಬಡೋಸ್: ಕೆರಿಬಿಯನ್‌ ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಟಿ 20ನ ವಿಶ್ವಕಪ್‌ಗೆ ತೆರಳಿದ್ದ ಟೀಮ್‌ ಇಂಡಿಯಾ ತಂಡ ಬಾರ್ಬಡೋಸ್‌ ನಗರದಲ್ಲಿ ಸಿಲುಕಿದೆ.

ರೋಹಿತ್‌ ಶರ್ಮಾ ಸೇರಿದಂತೆ ಭಾರತೀಯ ಕ್ರಿಕೆಟ್‌ ಆಟಗಾರರು ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ತಂಗಿದ್ದಾರೆ. ಚಂಡಮಾರುತ ಅಪ್ಪಳಿಸಿದ ಪರಿಣಾಮ ಭಾರತಕ್ಕೆ ಬರುವುದು ಇನ್ನೂ ಒಂದು ದಿನ ತಡವಾಗಬಹುದು ಎಂದು ವರದಿಯಾಗಿದೆ

ಭಾರಿ ಪ್ರಮಾಣದ ಗಾಳಿ ಮತ್ತು ಚಂಡಮಾರುತ ಅಪ್ಪಳಿಸಿದ ಪರಿಣಾಮ ಬಾರ್ಬಡೋಸ್‌ನಲ್ಲಿ ಭಾನುವಾರ ಸಂಜೆಯಿಂದ ಲಾಕ್‌ಡೌನ್‌ ಘೋಷಿಸಲಾಗಿದೆ. ಈ ನಗರದಲ್ಲಿ ಸುಮಾರು ಮೂರು ಲಕ್ಷ ಜನಸಂಖ್ಯೆಯಿದೆ.

ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಲಾಗಿದ್ದು, ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ನೀರು, ವಿದ್ಯುತ್‌ ಪೂರೈಕೆಗೂ ಅಡಚಣೆಯಾಗಿದೆ.

ಎಲ್ಲವೂ ಸರಿ ಇದ್ದಿದ್ದರೆ ಸೋಮವಾರ ಜಯ್‌ ಶಾ ಮತ್ತು ಟೀಮ್‌ ಇಂಡಿಯಾ, ಟ್ರೋಫಿ ಹೊತ್ತು ಬಾರ್ಬಡೋಸ್‌ನಿಂದ ಭಾರತಕ್ಕೆ ಬಂದಿಳಿಯಬೇಕಿತ್ತು. ಆದರೆ ಚಂಡಮಾರುತದ ಪರಿಣಾಮ ಅದು ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT