ಇಸ್ಲಾಮಾಬಾದ್: ಧಾರ್ಮಿಕ ನಿಂದನೆಯ ವಿಷಯಗಳನ್ನು ಶುಕ್ರವಾರದೊಳಗೆ ತನ್ನ ವೆಬ್ಸೈಟ್ನಿಂದ ತೆಗೆದು ಹಾಕದಿದ್ದರೆ ವಿಕಿಪೀಡಿಯಾ ಮೇಲೆ ನಿಷೇಧ ಹೇರುವುದಾಗಿ ಪಾಕಿಸ್ತಾನ ಎಚ್ಚರಿಸಿದೆ.

ಇದರ ಭಾಗವಾಗಿ ವಿಕಿಪೀಡಿಯಾ ವೆಬ್ಸೈಟ್ ಅನ್ನು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಕೆಳದರ್ಜೆಗೆ ಇಳಿಸಿದೆ. ಈ ವೇಳೆ ವೆಬ್ಸೈಟ್ ಆ್ಯಕ್ಸೆಸ್ ನಿಧಾನವಾಗಿರಲಿದೆ.

ಆನ್ಲೈನ್ ವಿಶ್ವಕೋಶ ವಿಕಿಪೀಡಿಯಾ ವೆಬ್ಸೈಟಿಗೆ ಲಕ್ಷಾಂತರ ಮಂದಿ ಭೇಟಿ ಕೊಡುತ್ತಾರೆ. ಈ ಹಿಂದೆಯೂ ವೆಬ್ಸೈಟ್ನ ನಿರ್ದಿಷ್ಟ ಪೇಜ್ಗಳ ಮೇಲೆ ನಿರ್ಬಂಧ ಹೇರಲಾಗಿತ್ತು.

ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಪಾಕಿಸ್ತಾನದ ಪ್ರಧಾನಿ ಕರೆ

ವಿಕಿಪೀಡಿಯಾ ಮೇಲಿನ ನಿಷೇಧ ಅಸಂವಿಧಾನಿಕ, ಹ್ಯಾಸ್ಪಾಸ್ಪದವಾಗಿದ್ದು, ಇದು ವಿದ್ಯಾರ್ಥಿಗಳು, ಶಿಕ್ಷಣ, ಆರೋಗ್ಯ ಕ್ಷೇತ್ರ, ಸಂಶೋಧಕರ ಮೇಲೆ ಪರಿಣಾಮ ಬೀರಲಿದೆ ಎಂದು ಡಿಜಿಟಲ್ ಹಕ್ಕುಗಳ ಹೋರಾಟಗಾರ ಉಸಾಮಾ ಖಿಲ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ವಿಕಿಪೀಡಿಯಾ ತಕ್ಷಣಕ್ಕೆ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಮುಸ್ಲಿಂ ಬಹುಸಂಖ್ಯಾತ ಪಾಕಿಸ್ತಾನದಲ್ಲಿ ಈ ಹಿಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂಬ ಕಾರಣ ಒಡ್ಡಿ ಯೂಟ್ಯೂಬ್, ಫೇಸ್ಬುಕ್ ಮೇಲೆ ನಿಷೇಧ ಹೇರಲಾಗಿತ್ತು.

ಪ್ರವಾದಿ ಮೊಹಮ್ಮದ್ ಕುರಿತ ಚಿತ್ರ ಪ್ರಸಾರಕ್ಕೆ ಸಂಬಂಧಿಸಿದಂತೆ 2012ರಿಂದ 2016ರ ವರೆಗೆ ಯೂಟ್ಯೂಬ್ ಮೇಲೆ ನಿಷೇಧ ಹೇರಲಾಗಿತ್ತು. ಕಾನೂನು ಬಾಹಿರ, ಅಶ್ಲೀಲ ದೃಶ್ಯ ಆರೋಪದ ಹಿನ್ನೆಲೆಯಲ್ಲಿ ಟಿಕ್ ಟಾಕ್ ಮೇಲೂ ನಿಷೇಧ ವಿಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.