ನವಾಜ್ ಷರೀಫ್ ಪ್ರಸ್ತಾವ ಇಸ್ಲಾಮಾಬಾದ್ (ಪಿಟಿಐ): ಸಂಸತ್ತಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್ –ನವಾಜ್ (ಪಿಎಂಎಲ್–ಎನ್) ಮುಖ್ಯಸ್ಥ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ‘ಸಹಭಾಗಿ ಮೈತ್ರಿ ಸರ್ಕಾರ’ ರಚಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಚಿಹ್ನೆ ಕುರಿತ ವಿವಾದದಿಂದಾಗಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್–ಇ–ಇನ್ಸಾಫ್ (ಪಿಟಿಐ) ಪಕ್ಷದ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದು ಒಟ್ಟು 101 ಕಡೆ ಗೆದ್ದಿದ್ದಾರೆ. ‘ಸಹಭಾಗಿ ಮೈತ್ರಿ ಸರ್ಕಾರ ರಚನೆ ಈಗಿನ ಏಕೈಕ ಸಾಧ್ಯತೆ. ಒಕ್ಕೂಟ ಸರ್ಕಾರ ರಚಿಸಲು ಮಾಜಿ ಮೈತ್ರಿಪಕ್ಷಗಳ ಜೊತೆಗೆ ಪಕ್ಷವು ಚರ್ಚೆ ಆರಂಭಿಸಿದೆ. ದೇಶದ ಹಿತಾಸಕ್ತಿ ದೃಷ್ಟಿಯಿಂದ ಪಿಟಿಐ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಕೈಜೋಡಿಸಬೇಕು‘ ಎಂದು ನವಾಜ್ ಷರೀಫ್ ಕೋರಿದ್ದಾರೆ.