ಜಿನೀವಾ: ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ಗಡಿಯಲ್ಲಿ ನಡೆಸುತ್ತಿರುವ ಎಲ್ಲಾ ಪ್ರಾಯೋಜಿತ ಭಯೋತ್ಪಾದನಾ ಚಟುವಟಿಕೆಗಳನ್ನು ನಿಲ್ಲಿಸಬೇಕು. ಅಲ್ಪಸಂಖ್ಯಾತ ಹಾಗೂ ಇತರ ಸಮುದಾಯಗಳ ಮೇಲೆ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೊನೆಗೊಳಿಸಬೇಕು ಎಂದು ಭಾರತ ಎಚ್ಚರಿಕೆ ನೀಡಿದೆ.

ನಿಷೇಧಕ್ಕೊಳಪಟ್ಟ ಹಾಗೂ ಭಯೋತ್ಪಾದನಾ ಪಟ್ಟಿಯಲ್ಲಿ ಗುರತಿಸಿಕೊಂಡವರಿಗೆ ಆರ್ಥಿಕ ನೆರವು ಹಾಗೂ ವಿಶ್ವಸಂಸ್ಥೆ ಗುರುತಿಸಿರುವ ಅನೇಕ ಭಯೋತ್ಪಾದಕರಿಗೆ ಪಾಕಿಸ್ತಾನವು ನೆರವು ನೀಡುತ್ತಿರುವ ವಿಚಾರ ಮಾನವ ಹಕ್ಕುಗಳ ಮಂಡಳಿಗೆ ಚೆನ್ನಾಗಿ ತಿಳಿದಿದೆ ಎಂದು ಜಿನೀವಾದ ಭಾರತದ ಶಾಶ್ವತ ಮಂಡಳಿಯ ಮೊದಲ ಕಾರ್ಯದರ್ಶಿ ಪವನ್‌ಕುಮಾರ್ ಬಧೆ ತಿಳಿಸಿದರು.

ಪಾಕಿಸ್ತಾನವು ಭಯೋತ್ಪಾದಕರನ್ನು ಹುಟ್ಟು ಹಾಕುತ್ತಿರುವ ಫ್ಯಾಕ್ಟರಿಯಾಗಿ ಮಾರ್ಪಟ್ಟಿದೆ ಎಂಬ ಅಂಶವನ್ನು ಪಾಕಿಸ್ತಾನದ ನಾಯಕರೇ ಒಪ್ಪಿಕೊಂಡಿದ್ದಾರೆ ಎಂಬುದನ್ನು ಅವರು ನೆನಪಿಸಿದರು.

‘ಭಯೋತ್ಪಾದನೆ ಎಂಬುದು ಮಾನವ ಹಕ್ಕುಉಲ್ಲಂಘನೆಯ ಕೆಟ್ಟ ರೂಪ ಹಾಗೂ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವವರು ಮಾನವ ಹಕ್ಕುಗಳನ್ನು ದುರುಪಯೋಗ ಪಡಿಸುತ್ತಿರುವವರು‘ ಎಂದು ಅವರು ಒತ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.