ಇಸ್ಲಾಮಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇಂಧನ ದರವನ್ನು ಕಡಿತಗೊಳಿಸಿದ್ದಾರೆ. ಪೆಟ್ರೋಲ್ ದರ 18.50 ಪಾಕಿಸ್ತಾನ ರೂಪಾಯಿ ಹಾಗೂ ಡೀಸೆಲ್ ದರ 40.54 ಪಾಕಿಸ್ತಾನ ರೂಪಾಯಿಯಷ್ಟು ಇಳಿಕೆ ಮಾಡಿದ್ದಾರೆ.

3 ತಿಂಗಳ ಹಿಂದೆ ಶೆಹಬಾಜ್ ಅವರು ಅಧಿಕಾರಕ್ಕೆ ಬಂದ ಬಳಿಕ 4 ಸುತ್ತಿನ ದೊಡ್ಡ ಮೊತ್ತದ ಬೆಲೆ ಏರಿಕೆಯಾಗಿತ್ತು. ಇದೀಗ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಿಂದ ಅಲ್ಲಿನ ಜನರಿಗೆ ಕೊಂಚ ನಿರಾಳತೆ ಸಿಕ್ಕಂತಾಗಿದೆ.

ಕಚ್ಚಾ ತೈಲ ದರ ಒಂದು ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕಡಿಮೆಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶೆಹಬಾಜ್ ಹೇಳಿದ್ದಾರೆ.

ಇಳಿಕೆಯೊಂದಿಗೆ ಪಾಕಿಸ್ತಾನದಲ್ಲಿ ಪ್ರಸ್ತುತ ಒಂದು ಲೀಟರ್ ಪೆಟ್ರೋಲ್‌ಗೆ 230.24 ಪಾಕಿಸ್ತಾನಿ ರೂಪಾಯಿ (ಇದು ಭಾರತದ ₹ 87.84ಕ್ಕೆ ಸಮ) ಇದೆ. ಡೀಸೆಲ್ ದರ 236 ಪಾಕಿಸ್ತಾನಿ ರೂಪಾಯಿ (ಇದು ಭಾರತದ ₹ 90.04ಕ್ಕೆ ಸಮ) ಇದೆ.

ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್ ದರ ಲೀಟರ್ ಒಂದಕ್ಕೆ ₹ 101.94 ಇದೆ. ಡೀಸೆಲ್ ದರ ₹ 87.89 ಇದೆ.

ಓದಿ...ಪಾಕ್: ಮಕ್ಕಳ ಮುಂದೆಯೇ ಪತ್ನಿಯನ್ನು ಕೊಂದು ಕಡಾಯಿಯಲ್ಲಿ ಬೇಯಿಸಿದ ಕ್ರೂರಿ ಪತಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.