ನವದೆಹಲಿ: ನರೇಂದ್ರ ಮೋದಿ ಅವರು ಸೋಮವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ತಮ್ಮ ಈಚೆಗಿನ ಉಕ್ರೇನ್ ಭೇಟಿ ಕುರಿತು ವಿವರಿಸಿದ್ದಾರೆ.

‘ಉಕ್ರೇನ್‌ನಲ್ಲಿನ ಪರಿಸ್ಥಿತಿ ಸೇರಿದಂತೆ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ. ಉಕ್ರೇನ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಮರಳಲು ಭಾರತದ ಸಂಪೂರ್ಣ ಬೆಂಬಲವನ್ನು ನಾನು ಬೈಡನ್ ಅವರಲ್ಲಿ ಪುನರುಚ್ಚರಿಸಿದೆ’ ಎಂದು ಮೋದಿ ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.

‘ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಿದ್ದು, ಅಲ್ಲಿ ಸಹಜ ಸ್ಥಿತಿಯನ್ನು ಶೀಘ್ರವಾಗಿ ಮರುಸ್ಥಾಪಿಸುವ ಅಗತ್ಯದ ಬಗ್ಗೆ ಒತ್ತಿಹೇಳಿದ್ದೇನೆ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರ, ಅದರಲ್ಲೂ ವಿಶೇಷವಾಗಿ ಹಿಂದೂಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುತ್ತೇವೆ’ ಎಂದಿದ್ದಾರೆ.

ದೂರವಾಣಿ ಸಂಭಾಷಣೆ ವೇಳೆ ಮೋದಿ ಅವರು ತಮ್ಮ ಉಕ್ರೇನ್ ಭೇಟಿಯ ಕುರಿತ ವಿವರಗಳನ್ನು ಬೈಡನ್ ಅವರಿಗೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ಕ್ವಾಡ್’ ಒಳಗೊಂಡಂತೆ ವಿವಿಧ ಶೃಂಗಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತ–ಅಮೆರಿಕ ಸಹಭಾಗಿತ್ವವು ಉಭಯ ದೇಶಗಳ ಜನರು ಹಾಗೂ ಇಡೀ ವಿಶ್ವಕ್ಕೆ ಪ್ರಯೋಜನ ನೀಡುವ ಗುರಿಯನ್ನು ಹೊಂದಿದೆ ಎಂಬುದನ್ನು ಮೋದಿ ಹಾಗೂ ಬೈಡನ್ ಒತ್ತಿ ಹೇಳಿದ್ದಾರೆ’ ಎಂದು ಪ್ರಕಟಣೆ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.