ಲಂಡನ್ (ಪಿಟಿಐ): ವಾಸ್ತು ವಿನ್ಯಾಸಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೇಶದ ಪ್ರಸಿದ್ಧ ವಾಸ್ತು ವಿನ್ಯಾಸಕ ಬಾಲಕೃಷ್ಣ ದೋಶಿ ಅವರು ಬ್ರಿಟನ್ನ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಬ್ರಿಟಿಷ್ (ಆರ್ಐಬಿಎ) ನೀಡುವ ಪ್ರತಿಷ್ಠಿತ ‘ರಾಯಲ್ ಗೋಲ್ಡ್ ಮೆಡಲ್–2022’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ವಾಸ್ತುಶಿಲ್ಪ ಕ್ಷೇತ್ರದಲ್ಲಿ ನೀಡಲಾಗುವ ವಿಶ್ವದ ಅತ್ಯುನ್ನತ ಗೌರವ ಇದಾಗಿದೆ.

94 ವರ್ಷದ ಬಾಲಕೃಷ್ಣ ದೋಶಿ ಅವರು 70 ವರ್ಷಗಳ ವೃತ್ತಿಜೀವನದಲ್ಲಿ 100ಕ್ಕೂಹೆಚ್ಚು ಯೋಜನೆಗಳಿಗೆ ವಾಸ್ತು ರಚನೆ ಮಾಡಿದ್ದಾರೆ. ವೃತ್ತಿಪರ ಕೆಲಸದ ಜತೆಗೆ ಅವರು ಭಾರತ ಸೇರಿದಂತೆ ನೆರೆಯ ದೇಶಗಳಲ್ಲಿ ಬೋಧನಾ ಕಾರ್ಯದಲ್ಲೂ ತೊಡಗಿದ್ದಾರೆ. ಈ ಮೂಲಕ ಅವರು ವಾಸ್ತು ವಿನ್ಯಾಸ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ್ದಾರೆ ಎಂದು ಆರ್ಐಬಿಎಪ್ರಕಟಣೆಯಲ್ಲಿ ತಿಳಿಸಿದೆ.

‘ರಾಯಲ್ ಗೋಲ್ಡ್ ಮೆಡಲ್’ ಅನ್ನು ವಾಸ್ತು ವಿನ್ಯಾಸ ಕ್ಷೇತ್ರದ ಪ್ರಗತಿ ಮತ್ತು ಅದರ ಮೇಲೆ ಮಹತ್ವದ ಪ್ರಭಾವ ಬೀರಿದ ವ್ಯಕ್ತಿ ಅಥವಾ ಜನರ ಗುಂಪಿಗೆ ನೀಡಲಾಗುತ್ತದೆ. ಈ ಕ್ಷೇತ್ರದಲ್ಲಿ ದೋಶಿ ಅವರ ಜೀವಮಾನ ಶ್ರೇಷ್ಠ ಸಾಧನೆಯನ್ನು ಗುರುತಿಸಿ ರಾಣಿ ಎಲಿಜಬೆತ್–2 ಅವರು ಅನುಮೋದನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.