ಇಸ್ಲಾಮಾಬಾದ್:ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಬ್ರಿಟನ್ ರಾಜಕುಮಾರ ವಿಲಿಯಂ ಮತ್ತು ಪತ್ನಿ ಕೇಟ್ ಮಿಡ್ಲ್‌ಟನ್ ಅವರು ಪ್ರಧಾನಿ ಇಮ್ರಾನ್ ಖಾನ್, ಅಧ್ಯಕ್ಷ ಆರಿಫ್ ಅಲ್ವಿ ಅವರನ್ನು ಮಂಗಳವಾರ ಭೇಟಿಯಾದರು.

ಇದಕ್ಕೂ ಮೊದಲು ಇಲ್ಲಿನ ಬಾಲಕಿಯರ ಶಾಲೆಗೆ ಭೇಟಿ ನೀಡಿದ ದಂಪತಿ ಮಕ್ಕಳೊಂದಿಗೆ ಬೆರೆತರು.

ಇಮ್ರಾನ್ ಮನೆಯಲ್ಲಿ ಔತಣ ಸ್ವೀಕರಿಸಿದ ನಂತರಅಧ್ಯಕ್ಷರ ನಿವಾಸವಾದ ಐವಾನ್-ಇ-ಸದರ್‌ಗೆ ಆಗಮಿಸಿದ ವಿಲಿಯಂ ಮತ್ತು ಕೇಟ್ ಅವರನ್ನು ಅಧ್ಯಕ್ಷ ಅಲ್ವಿ ಮತ್ತು ಪತ್ನಿ ಸಮೀನಾ ಆರಿಫ್ ಬರಮಾಡಿಕೊಂಡರು.

‘ಮಾನಸಿಕ ಆರೋಗ್ಯ, ಹವಾಮಾನ ಬದಲಾವಣೆ ಮತ್ತು ಬಡತನ ನಿರ್ಮೂಲನೆ ಕುರಿತು ದಂಪತಿ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದರು’ ಎಂದು ಅಧ್ಯಕ್ಷರ ಕಾರ್ಯದರ್ಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಲಿಯಂ ದಂಪತಿ ತಮ್ಮ ಐದು ದಿನಗಳ ಪಾಕ್ ಪ್ರವಾಸದ ಅವಧಿಯಲ್ಲಿ ಖೈಬರ್ ಪಖ್ತುಂಖ್ವಾ, ಲಾಹೋರ್ ಮತ್ತು ಹಿಮಾಲಯದ ಮಾರ್ಗಲ್ಲಾ ಬೆಟ್ಟಗಳಿಗೆ ಅಲ್ಲದೆ ಉತ್ತರ ಭಾಗದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ‘ಜಿಯೊ ನ್ಯೂಸ್’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.