ಮಾಸ್ಕೊ (ಎಪಿ): ‘ಉಕ್ರೇನ್ ಮೇಲಿನ ಯುದ್ಧ ಗೆಲ್ಲಲ್ಲು ತನಗೆ ಅಣ್ವಸ್ತ್ರದ ಅಗತ್ಯವಿಲ್ಲ. ಆದರೆ, ಅದರ ಆಯ್ಕೆ ಯಾವಾಗಲೂ ಮುಕ್ತವಾಗಿರುತ್ತದೆ‘ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನ್ಯಾಟೊ ರಾಷ್ಟ್ರಗಳಿಗೆ ಸಂದೇಶ ರವಾನಿಸಿದ್ದಾರೆ.

‘ಉಕ್ರೇನ್ಗೆ ಸೇನಾ ಬೆಂಬಲ ನೀಡುವ ವಿಷಯದಲ್ಲಿ ಹೆಚ್ಚು ಮುನ್ನುಗ್ಗಬೇಡಿ. ರಷ್ಯಾದೊಂದಿಗೆ ಸಂಘರ್ಷ ನಿಮಗೂ ಅಪಾಯ ತರಬಹುದು. ಅಗತ್ಯಬಿದ್ದರೆ ಅಣ್ವಸ್ತ್ರ ಬಳಕೆಗೂ ರಷ್ಯಾ ಹಿಂಜರಿಯದು‘ ಎಂದು ಪುಟಿನ್ ಗುಡುಗಿದ್ದಾರೆ.

’ಉಕ್ರೇನ್ ಯುದ್ಧದಲ್ಲಿ ನಿಧಾನವಾಗಿ ಮಾಸ್ಕೊ ಮೇಲುಗೈ ಸಾಧಿಸುತ್ತಿದೆ. ಅದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪುಟಿನ್, ತನ್ನ ಗುರಿ ಸಾಧನೆಗೆ ಅಣ್ವಸ್ತ್ರಗಳ ಅಗತ್ಯವಿಲ್ಲ. ಆದರೆ ರಷ್ಯಾ ಅದನ್ನು ಎಂದಿಗೂ ಬಳಸುವುದಿಲ್ಲ ಎಂದು ಪಶ್ಚಿಮ ದೇಶಗಳು ಭಾವಿಸುವುದು ತಪ್ಪು‘ ಎಂದು ಹೇಳಿದ್ದಾರೆ.

ಇದನ್ನು ಹಗರುವಾಗಿ ಪರಿಗಣಿಸಬಾರದು. ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾದರೆ ಅಣ್ವಸ್ತ್ರ ಬಳಸಲು ರಷ್ಯಾ ಸಿದ್ಧ ಎಂದು ಅವರು ಪುನರುಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.