ರಿಯೊ ಡಿ ಜನೈರೊ (ನ್ಯೂಯಾರ್ಕ್ ಟೈಮ್ಸ್): ಇಲ್ಲಿನ 200 ವರ್ಷ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಭಾನುವಾರ ರಾತ್ರಿ ಬೆಂಕಿಗೆ ಆಹುತಿಯಾಗಿದೆ. ಎರಡು ಕೋಟಿಗೂ ಹೆಚ್ಚು ವಸ್ತುಗಳು ಭಸ್ಮವಾಗಿವೆ.

ಈಜಿಪ್ಟ್ನ ಮಮ್ಮಿಗಳು, ಗ್ರೀಕೋ–ರೋಮನ್ ಪ್ರಾಚೀನ ವಸ್ತುಗಳು, ಡೈನೊಸಾರ್ ಪಳೆಯುಳಿಕೆಗಳು, ಪ್ರಾಚೀನ ಮಾನವನ ಅಸ್ಥಿಪಂಜರಗಳು ಈ ಸಂಗ್ರಹಾಲಯದಲ್ಲಿದ್ದು, ಬಹುತೇಕ ಬೆಂಕಿಗೆ ಆಹುತಿಯಾಗಿವೆ.ಸಂಗ್ರಹಾಲಯದ ಸುತ್ತ ದಟ್ಟ ಹೊಗೆ ಆವರಿಸಿತ್ತು.

‘ಭಾನುವಾರ ರಾತ್ರಿ 7.30ರ ಸುಮಾರಿಗೆ ಬೆಂಕಿ ಹೊತ್ತುಕೊಂಡಿದೆ. ಈ ವೇಳೆ, ವಸ್ತು ಸಂಗ್ರಹಾಲಯದ ಬಾಗಿಲು ಮುಚ್ಚಲಾಗಿತ್ತು. ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ’ ಎಂದು ಮ್ಯೂಸಿಯಂನ ಅಧಿಕಾರಿಗಳು ತಿಳಿಸಿದ್ದಾರೆ.

‘ಇದು ಎಲ್ಲ ಬ್ರೆಜಿಲಿಯನ್ನರಿಗೆ ದುಃಖದ ದಿನ’ ಎಂದು ಬ್ರೆಜಿಲ್ ಅಧ್ಯಕ್ಷ ಮೈಕಲ್ ಟೆಮರ್ ಟ್ವೀಟ್ ಮಾಡಿದ್ದಾರೆ.

‘200 ವರ್ಷಗಳ ಶ್ರಮ, ಸಂಶೋಧನೆ ಮತ್ತು ಜ್ಞಾನವನ್ನು ಅವಘಡದಲ್ಲಿ ಕಳೆದುಕೊಂಡಿದ್ದೇವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಸ್ತು ಸಂಗ್ರಹಾಲಯ ನಿರ್ವಹಣೆ ಕೊರತೆ ಎದುರಿಸುತ್ತಿತ್ತು. ಸರ್ಕಾರವೂ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕಾರಣ ದುರಸ್ತಿ ಕಡೆಗೆ ಗಮನ ಕೊಟ್ಟಿರಲಿಲ್ಲ. ಪ್ರೊಫೆಸರ್ಗಳು ಸಾರ್ವಜನಿಕರಿಂದ ದೇಣಿಗೆ ಎತ್ತಿ ಆ ಹಣದ ಮೂಲಕ ಸಂಗ್ರಹಾಲಯದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರುಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಅವಘಡಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಕಲಾವಿದರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.