ಕೊಲಂಬೊ: ಶ್ರೀಲಂಕಾದ ನೂತನ ಪ್ರಧಾನಿಯಾಗಿರನಿಲ್ ವಿಕ್ರಮಸಿಂಘೆ ಅಧಿಕಾರ ವಹಿಸಿಕೊಂಡ ಬಳಿಕ, ಮೊದಲ ಬಾರಿಗೆ ಸಂಸತ್ ಅಧಿವೇಶನ ನಡೆಯುತ್ತಿದೆ.

ಈ ಮೂಲಕ ದೇಶದಲ್ಲಿ ತಲೆದೋರಿದ 51 ದಿನಗಳ ರಾಜಕೀಯ ಬಿಕ್ಕಟ್ಟು ಕೊನೆಯಾದಂತಾಗಿದೆ.

ಆದರೆ ಕ್ಯಾಬಿನೆಟ್ ದರ್ಜೆ ಸಚಿವರ ಆಯ್ಕೆಗೆ ಪ್ರಧಾನಿ ಮತ್ತು ಅಧ್ಯಕ್ಷರು ಒಪ್ಪಿಗೆ ನೀಡಬೇಕಿದೆ. ಈ ವಾರದ ಸಂಸತ್ತಿನ ವ್ಯವಹಾರಗಳನ್ನು ನಿರ್ಧರಿಸಲು ಸ್ಪೀಕರ್ ಕರು ಜಯಸೂರ್ಯ ಅವರು ಮಂಗಳವಾರ ಸಭೆ ನಡೆಸಿದರು.

ಮಹಿಂದಾ ರಾಜಪಕ್ಸೆ ಅವರು ಸಂಸತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದುವರೆಗೆ ತಮಿಳು ಪಕ್ಷದ ಹಿರಿಯ ನಾಯಕ ಆರ್. ಸಂಪಂಥನ್ ನಾಯಕರಾಗಿದ್ದರು.

ರಾಜಪಕ್ಸೆ ಅವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದನ್ನು ಸ್ಪೀಕರ್ ಕರು ಜಯಸೂರ್ಯ ಸಂಸತ್ತಿನಲ್ಲಿ ಪ್ರಕಟಿಸಿದರು.

ರಧಾನಿಯಾಗಿದ್ದ ರನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ಅವರ ಜಾಗಕ್ಕೆ ಮಹಿಂದಾ ರಾಜಪಕ್ಸೆ ಅವರನ್ನು ಅಧ್ಯಕ್ಷರು ನೇಮಿಸಿದಾಗಿನಿಂದ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿತ್ತು. ಸಂಸತ್ ಅನ್ನು ಇನ್ನೂ 20 ತಿಂಗಳ ಅವಧಿ ಇದ್ದಾಗಲೇ ವಿಸರ್ಜಿಸಿ, ಜನವರಿ 5ರಂದು ಮಧ್ಯಂತರ ಚುನಾವಣೆಗೆ ಸಿರಿಸೇನಾ ಆದೇಶಿಸಿದ್ದರು. ಸುಪ್ರೀಂ ಕೋರ್ಟ್ ನೀಡಿದ ಎರಡು ಮಹತ್ವದ ತೀರ್ಪುಗಳಿಂದಾಗಿ, ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಮಹಿಂದ ರಾಜಪಕ್ಸೆ ಅವರು ಮಾಡಿದ್ದ ಯತ್ನಗಳು ವಿಫಲವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.