ಕಾಬೂಲ್: ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ನಾಲ್ಕು ಕಾರುಗಳು ಮತ್ತು ಒಂದು ಹೆಲಿಕಾಪ್ಟರ್ ತುಂಬಾ ನಗದಿನೊಂದಿಗೆ ದೇಶ ಬಿಟ್ಟು ತೆರಳಿದ್ದರು ಎಂದು ಕಾಬೂಲ್ನಲ್ಲಿರುವ ರಷ್ಯಾ ರಾಯಭಾರ ಕಚೇರಿ ತಿಳಿಸಿದೆ.

ತುಂಬಿಕೊಳ್ಳಲು ಜಾಗವಿಲ್ಲದೆ ಸ್ವಲ್ಪ ನಗದನ್ನು ಬಿಟ್ಟು ಅವರು ತೆರಳಬೇಕಾಯಿತು ಎಂದೂ ರಷ್ಯಾ ರಾಯಭಾರ ಕಚೇರಿ ಹೇಳಿರುವುದಾಗಿ ‘ಆರ್ಐಎ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಓದಿ:ಅಫ್ಗಾನಿಸ್ತಾನದಲ್ಲಿ ಅಮೆರಿಕ: ಎರಡು ದಶಕಗಳಲ್ಲಿ ನಡೆದಿದ್ದೇನು? ಇಲ್ಲಿದೆ ಮಾಹಿತಿ

‘ನಾಲ್ಕು ಕಾರುಗಳಲ್ಲಿ ಪೂರ್ತಿಯಾಗಿ ನಗದನ್ನು ತುಂಬಲಾಗಿತ್ತು. ಮತ್ತಷ್ಟು ಹಣವನ್ನು ಹೆಲಿಕಾಪ್ಟರ್ನಲ್ಲಿ ತುಂಬಲಾಯಿತು. ಆದರೆ ಎಲ್ಲವನ್ನೂ ಅದರಲ್ಲಿ ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದಷ್ಟು ನಗದು ರಸ್ತೆ ಮೇಲೆ ಬಿದ್ದಿತ್ತು’ ಎಂದು ರಷ್ಯಾ ರಾಯಭಾರ ಕಚೇರಿಯ ವಕ್ತಾರರಾದ ನಿಕಿತಾ ಇಶ್ಚೆಂಕೊ ಹೇಳಿದ್ದಾರೆ.

ತಾಲಿಬಾನ್ ಉಗ್ರರು ಕಾಬೂಲ್ ಪ್ರವೇಶಿಸುತ್ತಿದ್ದಂತೆಯೇ ಭಾನುವಾರ ಘನಿ ಅವರು ದೇಶ ತೊರೆದಿದ್ದರು. ಮುಂದೆ ಸಂಭವಿಸಲಿರುವ ರಕ್ತಪಾತವನ್ನು ತಪ್ಪಿಸುವ ಸಲುವಾಗಿ ದೇಶ ತೊರೆಯುತ್ತಿರುವುದಾಗಿ ಅವರು ಹೇಳಿದ್ದಾರೆ.

ಓದಿ:ಅಫ್ಗನ್ ತೊರೆಯಲು ಮುಂದಾದ ಸಾವಿರಾರು ಜನ: ವಿಮಾನ ನಿಲ್ದಾಣದಲ್ಲಿ ನೂಕುನುಗ್ಗಲು

ಕಾಬೂಲ್ನಲ್ಲಿ ರಾಜತಾಂತ್ರಿಕ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತೇವೆ. ತಾಲಿಬಾನ್ನೊಂದಿಗೆ ಬಾಂಧವ್ಯ ಹೊಂದುವ ಆಶಯವಿದ್ದರೂ ಈಗಲೇ ತಾಲಿಬಾನ್ ಅನ್ನು ಆಫ್ಗನ್ನ ಆಡಳಿತಗಾರ ಎಂದು ಪರಿಗಣಿಸುವುದಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ರಷ್ಯಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.