ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

16 ಕೀಟಗಳ ಸೇವನೆಗೆ ಸಿಂಗಪುರ ಸರ್ಕಾರ ಅನುಮತಿ

Published : 8 ಜುಲೈ 2024, 12:28 IST
Last Updated : 8 ಜುಲೈ 2024, 12:28 IST
ಫಾಲೋ ಮಾಡಿ
Comments

ಸಿಂಗಪುರ: ಜೀರುಂಡೆ, ಮಿಡತೆ, ರೇಷ್ಮೆಹುಳು ಸೇರಿದಂತೆ 16 ಬಗೆಯ ಕೀಟಗಳನ್ನು ಮನುಷ್ಯರು ಸೇವಿಸಬಹುದು ಎಂದು ಸಿಂಗಪುರ ಆಹಾರ ಕಾವಲು ಸಂಸ್ಥೆಯು ಸೋಮವಾರ ಅನುಮೋದನೆ ನೀಡಿದೆ. ಚೀನಾ–ಭಾರತ ಸೇರಿದಂತೆ ‌ಜಾಗತಿಕ ಆಹಾರ ಪಟ್ಟಿಗೂ ಇವುಗಳನ್ನು ಸೇರ್ಪಡೆಗೊಳಿಸಿದೆ.

‘ಬಹು ನಿರೀಕ್ಷಿತ ಘೋಷಣೆಯಿಂದ ಕೀಟಗಳನ್ನು ಬೆಳೆಸಿ, ಸಿಂಗಪುರಕ್ಕೆ ಪೂರೈಕೆ ಮಾಡುವ ಚೀನಾ, ‌ಥಾಯ್‌ಲೆಂಡ್‌, ವಿಯೆಟ್ನಾಂ ದೇಶಗಳ ಉದ್ಯಮಕ್ಕೆ ಹೆಚ್ಚಿನ ಸಂತಸ ತಂದಿದೆ’ ಎಂದು ‘ದಿ ಸ್ಟ್ರೇಟ್‌ ಟೈಮ್ಸ್‌’ ಪತ್ರಿಕೆ ವರದಿ ಮಾಡಿದೆ.

ಮಾನವ ಬಳಕೆಗೆ, ಜಾನುವಾರುಗಳಿಗಾಗಿ ಕೀಟಗಳನ್ನು ಸಾಕುವವರು ಹಾಗೂ ಆಮದು ಮಾಡುವವರು ಸಿಂಗಪುರ ಆಹಾರ ಪ್ರಾಧಿಕಾರ (ಎಸ್‌ಎಫ್‌ಎ)ಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸೂಚಿಸಿದೆ. ಆಮದು ಮಾಡಿಕೊಳ್ಳುವ ಕೀಟಗಳನ್ನು ನಿಯಮಾವಳಿಯಂತೆ ಸಾಕಲಾಗಿದ್ದು, ಕಾಡಿನಿಂದ ಸಂಗ್ರಹಿಸಿಲ್ಲ ಎಂದು ಸಾಕ್ಷಿ ಸಮೇತ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದೆ.

‘ಕೀಟ ಉತ್ಪನ್ನಗಳು ಆಹಾರ ಸುರಕ್ಷತೆಯ ಮಾನದಂಡದ ವ್ಯಾಪ್ತಿಗೆ ಒಳಪಡಲಿದೆ. ಎಸ್‌ಎಫ್‌ಎ ಮಾನದಂಡಕ್ಕೆ ಅನುಗುಣವಾಗಿ‌ರದಿದ್ದರೆ, ಮಾರಾಟಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಕೀಟಗಳ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡುವ ಕುರಿತಂತೆ ಎಸ್‌ಎಫ್‌ಎ 2022ರ ಅಕ್ಟೋಬರ್ ತಿಂಗಳಿನಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿತ್ತು.

ರೇಷ್ಮೆಹುಳ
ರೇಷ್ಮೆಹುಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT