ಮೊಗದಿಶು/ಸೋಮಾಲಿಯಾ: ರಾಜಧಾನಿ ಮೊಗದಿಶುವಿನ ಕಡಲ ತೀರದ ಹೋಟೆಲ್ವೊಂದರ ಮೇಲೆ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ 32 ಜನರು ಮೃತಪಟ್ಟಿದ್ದು, 63 ಮಂದಿ ಗಾಯಗೊಂಡಿದ್ದಾರೆ

‘ಮೃತರಲ್ಲಿ ಒಬ್ಬ ಯೋಧ ಸೇರಿದ್ದಾರೆ. ಮೊದಲು ಸ್ಫೋಟ ಸಂಭವಿಸಿದ್ದು, ನಂತರ ಗುಂಡಿನ ದಾಳಿ ನಡೆದಿದೆ’ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಪೊಲೀಸ್ ವಕ್ತಾರ ಮೇಜರ್ ಅಬ್ದಿಫತ ಆದಾನ್ ಹಸ್ಸಾ ತಿಳಿಸಿದರು.

ಅಲ್-ಶಬಾಬ್ ಉಗ್ರ ಸಂಘಟನೆಯು, ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ತನ್ನ ಹೋರಾಟಗಾರರೇ ದಾಳಿ ನಡೆಸಿರುವುದಾಗಿ ರೇಡಿಯೋ ಪ್ರಸಾರದಲ್ಲಿ ಹೇಳಿದೆ.

‘ಹೋಟೆಲ್ ಬಳಿ ಉಗ್ರನೊಬ್ಬ ಸ್ಫೋಟಕ ಉಡುಪು ಧರಿಸುತ್ತಿರುವುದನ್ನು ನೋಡಿದ್ದೇನೆ. ಘಟನೆಯಲ್ಲಿ ನನ್ನ ಕೆಲ ಸ್ನೇಹಿತರು ಸತ್ತಿದ್ದು, ಅನೇಕರು ಗಾಯಗೊಂಡಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.