ಕೊಲಂಬೊ: ಶ್ರೀಲಂಕಾದಿಂದ ಪಲಾಯನ ಮಾಡಿದ್ದ ಪದಚ್ಯುತ ಅಧ್ಯಕ್ಷಗೊಟಬಯ ರಾಜಪಕ್ಸೆ ಅವರು ಏಳು ವಾರಗಳ ನಂತರ ಸ್ವದೇಶಕ್ಕೆ ವಾಪಸಾಗಿದ್ದು, ಸದ್ಯ ಅವರಿಗೆ ಸಾಂವಿಧಾನಿಕ ವಿನಾಯಿತಿಗಳ ರಕ್ಷಣೆ ಇಲ್ಲ. 12 ವರ್ಷಗಳ ಹಿಂದೆ ಇಬ್ಬರು ಯುವ ರಾಜಕೀಯ ಹೋರಾಟಗಾರರನ್ನು ಕಣ್ಮರೆಗೊಳಿಸಿದ ಸಂಬಂಧ ಈಗ ಅವರು ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ವಕೀಲರು ಶನಿವಾರ ತಿಳಿಸಿದರು.

ಇಬ್ಬರು ಯುವ ರಾಜಕೀಯ ಹೋರಾಟಗಾರರ ಕಣ್ಮರೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲುಕಳೆದ ಜೂನ್ನಲ್ಲೇ ರಾಜಪಕ್ಸ ಅವರಿಗೆ ಸಮನ್ಸ್ ನೀಡಲಾಗಿತ್ತು. ಆಗ ಅವರು ದೇಶದಿಂದ ಪರಾರಿಯಾಗಿದ್ದರು. ಮುಂದಿನ ವಾರ ಸುಪ್ರೀಂಕೋರ್ಟ್ ಎದುರು ವಿಚಾರಣೆಗೆ ಹಾಜರಿರಲು ಸಮನ್ಸ್ ಕೊಡಿಸಲಾಗುವುದು ಎಂದುಸಂತ್ರಸ್ತ ಕುಟುಂಬಗಳ ಪ್ರತಿನಿಧಿ ವಕೀಲ ನುವಾನ್ ಬೋಪೇಜ್ ಹೇಳಿದ್ದಾರೆ.

ಅಧ್ಯಕ್ಷರಾಗಿದ್ದಾಗ ಅವರಿಗಿದ್ದ ಸಾಂವಿಧಾನಿಕ ವಿನಾಯಿತಿ ರಕ್ಷಣೆಯಿಂದಾಗಿನ್ಯಾಯಾಲಯ ಪ್ರಕರಣಗಳು ಬಾಕಿ ಇರಲಿಲ್ಲ. 2019ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಗೊಟಬಯ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನೂ ರಕ್ಷಣಾ ಅಧಿಕಾರಿಗಳು ಹಿಂಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.