ಕೊಲಂಬೊ: ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗಾಗಿ ದ್ವೀಪರಾಷ್ಟ್ರ ಶ್ರೀಲಂಕಾದ ಪ್ರಯತ್ನಗಳಿಗಾಗಿ ಪ್ರಧಾನಿ ದಿನೇಶ್ ಗುಣವರ್ಧನಾ ಅವರಿಗೆ ನಿರಂತರ ಬೆಂಬಲ ನೀಡುವುದಾಗಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಭರವಸೆ ನೀಡಿದ್ದಾರೆ. ಅಲ್ಲದೇ ಶ್ರೀಲಂಕಾದ ಪ್ರಾದೇಶಿಕ ಸಮಗ್ರತೆ, ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಕಾಪಾಡಲು ಚೀನಾ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.

ಬೀಜಿಂಗ್‌ನ ಗ್ರೇಟ್ ಹಾಲ್‌ನಲ್ಲಿ ಬುಧವಾರ ಷಿ ಜಿನ್‌ಪಿಂಗ್ ಮತ್ತು ಗುಣವರ್ಧನಾ ನಡುವೆ ನಡೆದ ಸಭೆಯಲ್ಲಿ ಚೀನಾ ಮತ್ತು ಶ್ರೀಲಂಕಾ ಸ್ನೇಹ, ಶಾಂತಿ, ಪರಸ್ಪರ ಗೌರವ ಮತ್ತು ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದ ಅಂತರರಾಷ್ಟ್ರೀಯ ವ್ಯವಹಾರಗಳ ಪಂಚತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸಲು ಸಮ್ಮತಿಸಿವೆ ಎಂದು ಪ್ರಧಾನಮಂತ್ರಿಗಳ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ರಬ್ಬರ್ ರೈಸ್’ ಒಪ್ಪಂದವನ್ನು ಶ್ರೀಲಂಕಾದೊಂದಿಗೆ ಮುಂದುವರೆಸಲು ಚೀನಾ ಸಿದ್ಧವಾಗಿದೆ. ಪರಸ್ಪರ ರಾಜಕೀಯ ನಂಬಿಕೆಯನ್ನು ಕ್ರೋಡೀಕರಿಸಲು, ಆಡಳಿತದಲ್ಲಿ ಅನುಭವದ ವಿನಿಮಯ ಹೆಚ್ಚಿಸಲು ಪ್ರಾಯೋಗಿಕ ಸಹಕಾರವನ್ನು ವಿಸ್ತರಿಸಿ ಮತ್ತು ಉತ್ತಮ ಗುಣಮಟ್ಟದ ಯೋಜನೆ ಮತ್ತು ರಸ್ತೆ ಸಹಕಾರವನ್ನು ಮುನ್ನಡೆಸಿಕೊಳ್ಳಿ ಎಂದು ಷಿ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಶ್ರೀಲಂಕಾದ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಪ್ರಸ್ತುತಪಡಿಸಿದ ತಕ್ಷಣ ಚೀನಾ ಬೆಂಬಲ ನೀಡುತ್ತದೆ ಎಂದು ಅಧ್ಯಕ್ಷ ಷಿ ಭರವಸೆ ನೀಡಿದ್ದಾರೆ. ಶ್ರೀಲಂಕಾ ಆರ್ಥಿಕ ದಿವಾಳಿಗೆ ಗುರಿಯಾಗಿರುವ ನಡುವೆ ಕಳೆದ ಮಂಗಳವಾರ ಚೀನಾದ ಪ್ರಧಾನಿ ಲಿ ಕ್ವಿಂಗ್ ಮತ್ತು ದಿನೇಶ್ ಗುಣವರ್ಧನಾ ಭೇಟಿಯಾಗಿದ್ದ ಸಂದರ್ಭದಲ್ಲಿ 9 ಹೊಸ ಒಪ್ಪಂದಗಳಿಗೆ ಒಪ್ಪಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.