ಅಥೆನ್ಸ್: ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೀಸ್ನಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ಕಾರ್ಯಾರಂಭ ಮಾಡಲು ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ. ಸರ್ಕಾರದ ಈ ನಡೆಯನ್ನು ವಿರೋಧಿಸಿ 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಥೆನ್ಸ್ನ ಕೇಂದ್ರ ಭಾಗದಲ್ಲಿರುವ ‘ಯೂನಿವರ್ಸಿಟಿ ಆಫ್ ಅಥೆನ್ಸ್’ನ ಮುಖ್ಯ ಕಟ್ಟಡದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

‘ಅವರ ಲಾಭ ಅಥವಾ ನಮ್ಮ ಶಿಕ್ಷಣ’ ಎಂಬ ಬೃಹತ್ ಫಲಕವನ್ನು ಪ್ರದರ್ಶಿಸಿದ ಪ್ರತಿಭಟನಕಾರರು, ‘ಶಿಕ್ಷಣದಲ್ಲಿ ಮೂಗುತೂರಿಸಬೇಡಿ’ ಎಂಬ ಘೋಷಣೆ ಕೂಗಿದರು.

ಸರ್ಕಾರದ ಪ್ರಕಾರ, ಗ್ರೀಸ್ನಲ್ಲಿ ಶಾಖೆಗಳನ್ನು ತೆರೆಯಲಿರುವ ವಿದೇಶಗಳ ವಿ.ವಿಗಳು ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆ ಅಡಿ ಕಾರ್ಯನಿರ್ವಹಿಸಲಿವೆ. ಈ ಶಾಖೆಗಳು ಶುಲ್ಕ ವಿಧಿಸುತ್ತವೆ. ಆದರೆ, ಲಾಭರಹಿತ ಸಂಸ್ಥೆಗಳ ಮಾದರಿಯಲ್ಲಿ ಕಾರ್ಯನಿರ್ವಹಸುತ್ತವೆ.

ವಿದೇಶಿ ವಿ.ವಿಗಳು ದೇಶದ ಸಾರ್ವಜನಿಕ ವಿ.ವಿಗಳನ್ನು ದುರ್ಬಲಗೊಳಿಸುತ್ತವೆ. ಉನ್ನತ ಶಿಕ್ಷಣವು ಉಚಿತವಾಗಿ ದೊರೆಯುವ ನಿಟ್ಟಿನಲ್ಲಿ ಈ ವಿ.ವಿಗಳು ಅಡ್ಡಿಯಾಗಲಿವೆ ಎಂದು ವಿರೋಧಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ಶಿಕ್ಷಣ ಕಾಯ್ದೆಯನ್ನು ಗ್ರೀಸ್ ಸಂಸತ್ತು ಈ ತಿಂಗಳ ಅಂತ್ಯದಲ್ಲಿ ಅಂಗೀಕರಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.