ಖಾರ್ಟೂಮ್: ‘ಚುನಾಯಿತ ಸರ್ಕಾರದ ಆಡಳಿತ ಮರುಸ್ಥಾಪನೆಗೆ ಸೇನೆಯು ಬದ್ಧವಾಗಿದೆ’ ಎಂದು ಸುಡಾನ್ನ ಸೇನೆಯ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ.

ಸೇನೆ ಮತ್ತು ಅರೆಸೇನಾ ಪಡೆಯ ನಡುವಣ ಸಂಘರ್ಷದಿಂದ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸುವ ಆಶಯ ಹಳಿತಪ್ಪಿದೆ ಎಂಬ ಆತಂಕದ ನಡುವೆಯೇ ಈ ಹೇಳಿಕೆ ಹೊರಬಿದ್ದಿದೆ. ಸಂಘರ್ಷದ ಸಂದರ್ಭದಲ್ಲಿ ಸುಡಾನ್ನತ್ತ ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯುವುದು ಇದರ ಉದ್ದೇಶ ಎನ್ನಲಾಗಿದೆ.

ಸಂಘರ್ಷ ಆರಂಭವಾದ ಒಂದು ವಾರದ ನಂತರ ಸಾರ್ವಜನಿಕ ಭಾಷಣ ಮಾಡಿರುವ ಸೇನಾ ಮುಖ್ಯಸ್ಥ ಜನರಲ್ ಅಬ್ದುಲ್ ಫತ್ತಾಹ್ ಅಲ್ ಬುಹ್ರಾನ್, ‘ದೇಶದಲ್ಲಿ ಸುರಕ್ಷಿತ ಮತ್ತು ಸುಲಲಿತ ಕ್ರಮದಲ್ಲಿ ಪ್ರಜಾಪ್ರಭುತ್ವ ಆಡಳಿತ ಸ್ಥಾಪನೆಗೆ ಸೇನೆಯು ಕ್ರಮವಹಿಸಲಿದೆ’ ಎಂದು ಭರವಸೆ ನೀಡಿದರು.

ಸುಡಾನ್ನಲ್ಲಿ ರಂಜಾನ್ ಪವಿತ್ರ ಮಾಸದ ಕೊನೆಯ ದಿನವಾದ ಈದ್ ಉಲ್ ಫಿತ್ರ್ ದಿನದಂದೇ ಬುಹ್ರಾನ್ ಅವರ ಈ ಹೇಳಿಕೆ ಹೊರಬಿದ್ದಿದೆ.

ಸ್ಪೇನ್ನ 60 ನಾಗರಿಕರ ಸ್ಥಳಾಂತರಕ್ಕೆ ಸಿದ್ಧತೆ: ‘ಸುಡಾನ್ನ ಘರ್ಷಣೆ ಪೀಡಿತ ಖಾರ್ಟೂಮ್ನಿಂದ 60 ಮಂದಿ ಸ್ಪೇನ್ ನಾಗರಿಕರು ಮತ್ತು ಇತರ ದೇಶಗಳ 20 ಜನರನ್ನು ಸ್ಥಳಾಂತರಿಸಲು ಸ್ಪೇನ್ನ ಸೇನಾ ವಿಮಾನ ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವ ಜೋಸ್ ಮಾನುಯೆಲ್ ಅಲಬೇರ್ಸ್ ಅವರು ಶುಕ್ರವಾರ ತಿಳಿಸಿದ್ದಾರೆ.

ಕದನ ವಿರಾಮವಿಲ್ಲದೆ ಅಮೆರಿಕ ಸೇರಿ ವಿವಿಧ ದೇಶಗಳ ಅನುಪಸ್ಥಿತಿಯಲ್ಲಿ ನಾಗರಿಕರ ಸ್ಥಳಾಂತರ ಸಾಧ್ಯವಾಗುತ್ತಿಲ್ಲ. ಸಂಘರ್ಷ ಪ್ರತಿದಿನ ತೀವ್ರತೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜನರ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಲಬೇರ್ಸ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

413 ಜನರ ಸಾವು: ಡಬ್ಲ್ಯುಎಚ್ಒ

ಖಾರ್ಟೂಮ್: ಸುಡಾನ್ನಲ್ಲಿ ಈವರೆಗೆ 413 ಜನರು ಸತ್ತಿದ್ದು 3551 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಮೃತರಲ್ಲಿ ಕನಿಷ್ಠ ಒಂಬತ್ತು ಮತ್ತು ಗಾಯಗೊಂಡವರಲ್ಲಿ ಕನಿಷ್ಠ 50 ಮಕ್ಕಳು ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ ತಿಳಿಸಿದೆ. ರಾಜಧಾನಿ ಖಾರ್ಟೂಮ್ನ ಪ್ರಮುಖ ರಸ್ತೆಗಳಲ್ಲಿ ಸದ್ಯ ಸ್ಮಶಾನ ಮೌನ ಆವರಿಸಿದೆ. ಅಲ್ಲಲ್ಲಿ ಶವಗಳು ಬಿದ್ದಿವೆ. ‘ಖಾರ್ಟೂಮ್ನಲ್ಲಿ ಸುರಕ್ಷಿತ ಸ್ಥಳ ಎಂಬುದೇ ಇಲ್ಲ’ ಎಂದು ನಗರದಲ್ಲಿ ಬೇಕರಿ ವೃತ್ತಿ ಮಾಡುವ 37 ವರ್ಷದ ಮಹಿಳೆ ಡಾಲಿಯಾ ಅವರ ಹೇಳಿಕೆಯು ಅಲ್ಲಿನ ಸದ್ಯದ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ವಿಶ್ವಸಂಸ್ಥೆ ಮತ್ತು ಅಮೆರಿಕದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರ ಆಗ್ರಹದ ತರುವಾಯ ಸೇನೆ ಮತ್ತು ಅರೆಸೇನಾ ಪಡೆಯ ಮುಖ್ಯಸ್ಥರು ಈದ್ ಉಲ್ ಫಿತ್ರ್ ನಿಮಿತ್ತ ತಾತ್ಕಾಲಿಕವಾಗಿ ಸಂಘರ್ಷಕ್ಕೆ ವಿರಾಮ ನೀಡಲು ಒಪ್ಪಿದ್ದರು. ಸೇನೆಯ ಮುಖ್ಯಸ್ಥ ಮತ್ತು ಅರೆ ಸೇನಾ ಪಡೆಯ ಮುಖ್ಯಸ್ಥರು ಸುಡಾನ್ನ ಆಡಳಿತದ ಮೇಲೆ ಪ್ರಾಬಲ್ಯ ಹೊಂದಲು ಯತ್ನಿಸುತ್ತಿದ್ದಾರೆ. ಸುಡಾನ್ನ ಚುನಾಯಿತ ಆಡಳಿತವನ್ನು ಪದಚ್ಯುತಗೊಳಿಸಿ ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಈ ಇಬ್ಬರು ಜಂಟಿಯಾಗಿ 2021ರಲ್ಲಿ ಸೇನಾ ದಂಗೆ ನಡೆಸಿದ್ದರು.

ಸ್ಪೇನ್ನ 60 ನಾಗರಿಕರ ಸ್ಥಳಾಂತರಕ್ಕೆ ಸಿದ್ಧತೆ

ಮ್ಯಾಡ್ರಿಡ್: ‘ಸುಡಾನ್ನ ಘರ್ಷಣೆ ಪೀಡಿತ ಖಾರ್ಟೂಮ್ನಿಂದ 60 ಮಂದಿ ಸ್ಪೇನ್ ನಾಗರಿಕರು ಮತ್ತು ಇತರ ದೇಶಗಳ 20 ಜನರನ್ನು ಸ್ಥಳಾಂತರಿಸಲು ಸ್ಪೇನ್ನ ಸೇನಾ ವಿಮಾನ ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವ ಜೋಸ್ ಮಾನುಯೆಲ್ ಅಲಬೇರ್ಸ್ ಅವರು ಶುಕ್ರವಾರ ತಿಳಿಸಿದ್ದಾರೆ. ಕದನ ವಿರಾಮವಿಲ್ಲದೆ ಅಮೆರಿಕ ಸೇರಿ ವಿವಿಧ ದೇಶಗಳ ಅನುಪಸ್ಥಿತಿಯಲ್ಲಿ ನಾಗರಿಕರ ಸ್ಥಳಾಂತರ ಸಾಧ್ಯವಾಗುತ್ತಿಲ್ಲ. ಸಂಘರ್ಷ ಪ್ರತಿದಿನ ತೀವ್ರತೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜನರ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಲಬೇರ್ಸ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆದರೂ ಈಗ ಸೇನೆಯ ವಿಮಾನಗಳು ಸಿದ್ಧವಾಗಿವೆ ಮೊದಲ ಅವಕಾಶದಲ್ಲಿಯೇ ಪ್ರಾಮಾಣಿಕವಾಗಿ ಜನರನ್ನು ಕರೆತರಲು ಯತ್ನಿಸುತ್ತೇವೆ ಎಂದೂ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.