ಪೋರ್ಟ್‌ಲ್ಯಾಂಡ್ (ಅಮೆರಿಕ): ಇಲ್ಲಿನಒರೆಗಾನ್‌ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಮತ್ತು ಪ್ರತಿಭಟನಕಾರರ ನಡುವೆ ಶನಿವಾರ ಘರ್ಷಣೆ ನಡೆದಿದ್ದು, ಒಬ್ಬ ವ್ಯಕ್ತಿ ಗುಂಡಿಗೆ ಬಲಿಯಾಗಿದ್ದಾನೆ.

‘ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿಮೂರು ತಿಂಗಳಿಂದಒರೆಗಾನ್‌ನಲ್ಲಿ ರಾತ್ರಿ ಪ್ರತಿಭಟನೆಗಳು ನಡೆಯುತ್ತಿವೆ. ಶನಿವಾರ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಟ್ರಂಪ್ ಬೆಂಬಲಿಗರ ದೊಡ್ಡ ಗುಂಪೊಂದು ಬಂದಿತ್ತು. ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸಿದರು. ಈ ಗಲಭೆ ಸಂಬಂಧ ಹಲವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಶನಿವಾರ ಮಧ್ಯಾಹ್ನಕ್ಲಾಕಮಾಸ್ ಟೌನ್ ಸೆಂಟರ್ ಶಾಪಿಂಗ್ ಮಾಲ್ ಬಳಿ ರ‍್ಯಾಲಿ ಮುಗಿಸಿದ ಬಳಿಕಟ್ರಂಪ್ ಬೆಂಬಲಿಗರು ಸುಮಾರು 600 ವಾಹನಗಳಲ್ಲಿ ಸಂಜೆ 5.15 ರ ಸುಮಾರಿಗೆ ಪೋರ್ಟ್‌ಲ್ಯಾಂಡ್‌ನತ್ತ ತೆರಳುತ್ತಿದ್ದರು. ಈ ವೇಳೆಒರೆಗಾನ್‌ನಲ್ಲಿ ಎರಡೂ ಬಣಗಳ ನಡುವೆ ಮುಖಾಮುಖಿಯಾಗಿ, ಕಿತ್ತಾಟ ನಡೆದಿದೆ’ ಪೋರ್ಟ್‌ಲ್ಯಾಂಡ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.