ಅಂಕಾರ: ಸ್ವೀಡನ್‌ಗೆ ನ್ಯಾಟೊ ಸದಸ್ಯತ್ವ ನೀಡುವುದಕ್ಕೆ ದೀರ್ಘಕಾಲದ ಬಳಿಕ ಟರ್ಕಿ ಅನುಮೋದನೆ ನೀಡಿದೆ.

ನ್ಯಾಟೊದ 32ನೇ ಸದಸ್ಯ ರಾಷ್ಟ್ರವಾಗುವ ನಿಟ್ಟಿನಲ್ಲಿ ಸ್ವೀಡನ್ ಪರವಾಗಿ ಟರ್ಕಿಯ 287 ಸಂಸದರು ಮತ ಚಲಾಯಿಸಿದರು. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗಾನ್ ಅವರು ಸ್ವೀಡನ್‌ಗೆ ಬೆಂಬಲ ಸೂಚಿಸಿದ್ದರು.

‘ನ್ಯಾಟೊ ಸದಸ್ಯರಾಗುವ ನಿಟ್ಟಿನಲ್ಲಿ ನಾವು ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ’ ಎಂದು ಸ್ವೀಡನ್‌ನ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಹೇಳಿದ್ದಾರೆ.

ಟರ್ಕಿಯ ನಡೆಯನ್ನು ಸ್ವಾಗತಿಸಿರುವ ನ್ಯಾಟೊ ಮುಖ್ಯಸ್ಥ ಜೇನ್ಸ್ ಸ್ಟೋಲ್ಟೆನ್‌ಬರ್ಗ್ ಅವರು, ಹಂಗೇರಿ ಕೂಡ ಇದೇ ನಡೆಯನ್ನು ಅನುಸರಿಸಬೇಕು ಎಂದು ಕರೆ ನೀಡಿದ್ದಾರೆ. ಟರ್ಕಿಯನ್ನು ಅಮೆರಿಕ ಕೂಡ ಶ್ಲಾಘಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.