ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್ ಸಿಇಒ ಜಾಕ್ ಡಾರ್ಸಿ ಅವರ ಖಾತೆ ಹ್ಯಾಕ್ ಮಾಡಿ, ಅವರ ಖಾತೆಯಲ್ಲಿ ಜನಾಂಗೀಯ ನಿಂದನೆ ಮತ್ತು ಅವಮಾನಕಾರ ಟ್ವೀಟ್ಗಳನ್ನು ಮಾಡಲಾಗಿತ್ತು.

ಕೆಲವು ಟ್ವೀಟ್ಗಳಲ್ಲಿ ಚಕ್ಲಿಂಗ್ ಸ್ಕ್ವಾಡ್ (ChucklingSquad) ಹ್ಯಾಶ್ಟ್ಯಾಗ್ ಬಳಸಲಾಗಿತ್ತು. ಇದು ಹ್ಯಾಕರ್ ಗುಂಪಿನ ಗುರುತನ್ನು ಸೂಚಿಸುತ್ತದೆ ಎನ್ನಲಾಗಿದೆ.ಗಣ್ಯ ವ್ಯಕ್ತಿಗಳ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಹ್ಯಾಕ್ ಮಾಡುವಾಗಇದೇ ಹ್ಯಾಶ್ಟ್ಯಾಗನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಜನಾಂಗೀಯ ಮತ್ತು ನಾಜಿ ಸಿದ್ಧಾಂತಗಳ ವಿಶೇಷತೆಗಳನ್ನು ಬಿಂಬಿಸುವ ಸಂದೇಶಗಳನ್ನು ಟ್ವೀಟ್ ಒಳಗೊಂಡಿತ್ತು. ಅರ್ಧ ಗಂಟೆವರೆಗೆಜಾಕ್ ಡಾರ್ಸಿ ಖಾತೆಗಳಲ್ಲಿ ಅಸಹ್ಯಕರವಾದ ಪೋಸ್ಟ್ಗಳಿದ್ದವು.

ಮೊಬೈಲ್ ಸೇವಾಸಂಸ್ಥೆಯ ಕಣ್ತಿಪ್ಪಿನಿಂದಾಗಿ ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಟ್ವೀಟ್ಗಳನ್ನು ತೆಗೆದುಹಾಕಲಾಗಿದ್ದು, ಖಾತೆಯನ್ನು ಸರಿಪಡಿಸಲಾಗಿದೆ ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.

ಬಳಕೆದಾರರು ಎರಡು ಅಂಶಗಳ ದೃಢೀಕರಣಕ್ಕೆ ಆದ್ಯತೆ ನೀಡಬೇಕು. ಬಾಹ್ಯ ಸೇವೆಯ ಮೂಲಕ ತಮ್ಮ ಖಾತೆಯನ್ನು ದೃಢೀಕರಿಸಬೇಕು. ಯಾವ ಅಪ್ಲಿಕೇಶನ್ಖಾತೆಯೊಂದಿಗೆ ಲಿಂಕ್ ಆಗಿದೆ ಎಂಬುದನ್ನು ಪರಿಶೀಲಿಸಬೇಕುಎಂದು ಬ್ರಿಟಿಷ್ ಮೂಲದ ಭದ್ರತಾ ಸಲಹೆಗಾರ ಗ್ರಹಾಂ ಕ್ಲೂಲಿ ತಿಳಿಸಿದ್ದಾರೆ.

ಟ್ವಿಟರ್ಸಿಇಒ ತಮ್ಮ ಖಾತೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಹೇಗೆ? ಸಿಇಒ ಖಾತೆಗೆ ಸುರಕ್ಷತೆ ಒದಗಿಸದಿದ್ದರೆ ಜನಸಾಮಾನ್ಯರ ಕತೆಯೇನು ಎಂದು ಟ್ಟೀಟಿಗರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.