ಬರ್ಲಿನ್: ಕಳೆದ ಬೇಸಿಗೆಯಲ್ಲಿ ಟೆಹ್ರಾನ್ನಲ್ಲಿ ‘ವಿಧ್ವಂಸ ದಾಳಿ‘ಯಂಥಸ್ಫೋಟ ಸಂಭವಿಸಿದ ನಂತರ ಇರಾನ್ ಭೂಗತ ಪರಮಾಣು ಇಂಧನಕ್ಕೆ ಸಂಬಂಧಿಸಿದ ಸೌಲಭ್ಯಗಳುಳ್ಳಕೇಂದ್ರಾಪಗಾಮಿ (Centriguge) ಘಟಕವನ್ನು ನಿರ್ಮಾಣ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಪರಮಾಣ ಕಾವಲುಪಡೆಯ ತನಿಖಾಧಿಕಾರಿಗಳು ಖಚಿತಪಡಿಸಿದ್ದಾರೆ.

‘ಇರಾನ್ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಉತ್ಕೃಷ್ಟತೆಯ ಯುರೇನಿಯಂ ಸಂಗ್ರಹವನ್ನು ಮುಂದುವರೆಸಿದೆ. ಆದರೆ, ಶಸ್ತ್ರಾಸ್ತ್ರ ಉತ್ಪಾದಿಸುವ ಸಾಮರ್ಥ್ಯ ಹೊಂದಿಲ್ಲ'ಎಂದು ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ ಮಹಾನಿರ್ದೇಶಕ ರಾಫೆಲ್ ಗ್ರೊಸ್ಸಿ ಮಂಗಳವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ಜುಲೈನಲ್ಲಿ ನತಾಂಝ್ ಪರಮಾಣು ಕೇಂದ್ರವಿದ್ದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ ನಂತರ, ಟೆಹ್ರಾನ್, ಈ ಪ್ರದೇಶದ ಸುತ್ತಲಿರುವ ಪರ್ವತಗಳಲ್ಲಿ ಪರಮಾಣು ಕೇಂದ್ರಗಳಿಗೆ ಬೇಕಾದ ಸೌಲಭ್ಯಗಳನ್ನು ಹೊಂದಿರುವ ಹಾಗೂ ಹೆಚ್ಚು ಸುರಕ್ಷಿತವಾದ ಹೊಸ ಘಟಕವನ್ನು ನಿರ್ಮಿಸುವುದಾಗಿ ಹೇಳಿದೆ.

ನತಾಂಝ್ ಪರಮಾಣು ಕೇಂದ್ರದ ಉಪಗ್ರಹ ಚಿತ್ರಗಳನ್ನುತಜ್ಞರು ವಿಶ್ಲೇಷಿಸಿದಂತೆ, ಇರಾನ್ನ ಮಧ್ಯ ಇಸ್ಪಾಹಾನ್ ಪ್ರಾಂತ್ಯದಲ್ಲಿ ಇಲ್ಲಿವರೆಗೂ ಉತ್ಖನನದ ಯಾವುದೇ ಸ್ಪಷ್ಟ ಗುರುತುಗಳೂ ಕಂಡಿಲ್ಲ. ‘ಅವರು ಕೇಂದ್ರದ ನಿರ್ಮಾಣ ಕಾರ್ಯ ಶುರು ಮಾಡಿದ್ದಾರೆ. ಆದರೆ, ಅದನ್ನು ಪೂರ್ಣಗೊಳಿಸಿಲ್ಲ'ಎಂದು ಸ್ಪಷ್ಟಪಡಿಸಿರುವ ಗ್ರೊಸ್ಸಿ ‘ಇದೊಂದು ಧೀರ್ಘಕಾಲದ ಪ್ರಕ್ರಿಯೆ‘ ಎಂದು ಹೇಳಿದ್ದಾರೆ. ಈ ಕುರಿತು ಹೆಚ್ಚಿನ ವಿವರಣೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.