ವಾಷಿಂಗ್ಟನ್: ಅಮೆರಿಕದ ಅಟಾರ್ನಿ ಜನರಲ್ ವಿಲಿಯಮ್ ಬಾರ್ ರಾಜೀನಾಮೆ ನೀಡಿದ್ದಾರೆ.

ಅಧ್ಯಕ್ಷೀಯ ಚುನಾವಣೆಯ ಮತದಾನ ಸಂದರ್ಭದಲ್ಲಿ ಅಕ್ರಮ ನಡೆದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ಈ ಆರೋಪಕ್ಕೆ ಬಹಿರಂಗವಾಗಿಯೇ ಬಾರ್ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ನಂತರ ಟ್ರಂಪ್ ಅವರು ಡೆಪ್ಯುಟಿ ಅಟಾರ್ನಿ ಜನರಲ್ ಜೆಫ್ ರಾಸನ್ ಅವರನ್ನು ಹಂಗಾಮಿ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿದ್ದರು.

‘ಬಾರ್ ಅವರೊಂದಿಗೆ ಶ್ವೇತಭವನದಲ್ಲಿ ಈಗ ಸಭೆ ನಡೆಸಿದೆ. ಅವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಅವರ ಪತ್ರದ ಪ್ರಕಾರ ಇದೇ ಕ್ರಿಸ್ಮಸ್ಗೂ ಮುನ್ನ ಅವರು ಶ್ವೇತಭವನ ತೊರೆಯಲಿದ್ದು, ತಮ್ಮ ಕುಟುಂಬದೊಂದಿಗೆ ರಜಾಕಾಲ ಕಳೆಯಲಿದ್ದಾರೆ’ ಎಂದು ಟ್ರಂಪ್ ಅವರು ಟ್ವೀಟ್ ಮಾಡಿದ್ದರು.

ವಿಲಿಯಮ್ ಬಾರ್ ಅವರ ರಾಜೀನಾಮೆ ಪತ್ರವನ್ನು ಟ್ರಂಪ್ ತಮ್ಮ ಟ್ವೀಟ್ನೊಂದಿಗೆ ಹಂಚಿಕೊಂಡಿದ್ದಾರೆ. ‘ಡೆಪ್ಯುಟಿ ಅಟಾರ್ನಿ ಜನರಲ್ ಜೆಫ್ ರಾಸನ್ ಒಬ್ಬ ಅದ್ಭುತ ವ್ಯಕ್ತಿ. ಅವರು ಹಂಗಾಮಿ ಅಟಾರ್ನಿ ಜನರಲ್ ಆಗಿ ಕರ್ತವ್ಯ ನಿರ್ವಹಿಸುವರು. ರಿಚರ್ಡ್ ಡೊನೊ ಅವರು ಡೆಪ್ಯುಟಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುವರು. ಎಲ್ಲರಿಗೂ ಧನ್ಯವಾದ’ ಎಂದೂ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.