ವಾಷಿಂಗ್ಟನ್: ಚೀನಾ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಅಮೆರಿಕ ಸಿದ್ಧತೆ ನಡೆಸಿದೆ. ಆದರೆ, ಕ್ರಮಗಳ ಸ್ವರೂಪ ಹೇಗಿರಲಿದೆ ಎಂಬ ಬಗ್ಗೆ ಶ್ವೇತ ಭವನ ಯಾವುದೇ ಸುಳಿವು ನೀಡಿಲ್ಲ.

ಕೊರೊನಾ ಸೋಂಕು ಜಗತ್ತನ್ನೇ ತತ್ತರಿಸುವಂತೆ ಮಾಡಿದ ನಂತರ, ಚೀನಾ ವಿರುದ್ಧ ಅಮೆರಿಕ ಟೀಕಾ ಪ್ರಹಾರ ಆರಂಭಿಸಿತು. ಕೊರೊನಾ ವೈರಸ್ ಹರಡಲು ಚೀನಾ ಕಾರಣ ಎಂಬ ಗಂಭೀರ ಆರೋಪವನ್ನೂ ಮಾಡಿತು. ಈ ವಿಷಯವೇ ಎರಡೂ ದೇಶಗಳ ನಡುವಿನ ಸಂಬಂಧ ಹದಗೆಡಲು ಕಾರಣವಾಗಿದೆ.

ಹಾಂಗ್‌ಕಾಂಗ್‌ನಲ್ಲಿ ನೂತನ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ, ಅಲ್ಲಿರುವ ಅಮೆರಿಕದ ಪತ್ರಕರ್ತರ ಮೇಲೆ ನಿರ್ಬಂಧ ಹೇರಿಕೆ, ಚೀನಾದಲ್ಲಿ ಉಘೈರ್ ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ಅಮೆರಿಕ ಪ್ರಶ್ನಿಸಿದ್ದು ಸಹ ಚೀನಾ ಕೆರಳಲು ಕಾರಣವಾಗಿದೆ.

‘ಚೀನಾ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಬಹಿರಂಗಪಡಿಸುವರು. ಆದರೆ, ಆ ದೇಶದ ವಿರುದ್ಧ ಕ್ರಮ ನಿಶ್ಚಿತ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಲಿ ಮ್ಯಾಕ್‌ಎನಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.