ವಾಷಿಂಗ್ಟನ್: 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದ 116 ಮಂದಿ ಅಕ್ರಮ ವಲಸಿಗರನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ. ದೊಡ್ಡ ಚಾರ್ಟರ್ ವಿಮಾನದಲ್ಲಿ ಚೀನಿಯರನ್ನು ತವರಿಗೆ ಕಳುಹಿಸಲಾಗಿದೆ.

ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ವಲಸಿಗರ ವಿಷಯ ಅತ್ಯಂತ ಪ್ರಮುಖ ಚರ್ಚಾ ವಿಷಯಗಳಲ್ಲಿ ಒಂದಾಗಿದೆ.

‘ಕಾನೂನುಬಾಹಿರವಾಗಿ ಅಮೆರಿಕದಲ್ಲಿ ನೆಲೆಸಿರುವ ವಿದೇಶಿಗರನ್ನು ಗಡೀಪಾರು ಮಾಡಲು ನಿರಂತರವಾಗಿ ನಮ್ಮ ವಲಸೆ ಕಾನೂನನ್ನು ಜಾರಿಗೊಳಿಸುತ್ತಿರುತ್ತೇವೆ ಎಂದು ಹೋಮ್ಲ್ಯಾಂಡ್ ಕಾರ್ಯದರ್ಶಿ ಅಲೆಜಾಂಡ್ರೊ ಮಯೊರ್ಕಾಸ್ ಹೇಳಿದ್ದಾರೆ.

'ಅನಿಯಮಿತ ವಲಸೆಯನ್ನು ನಿಯಂತ್ರಿಸಲು ಮತ್ತು ತಡೆಯಲು ಹಾಗೂ ವಿಸ್ತೃತ ಕಾನೂನು ಜಾರಿ ಪ್ರಯತ್ನಗಳ ಮೂಲಕ ಅಕ್ರಮ ಮಾನವ ಕಳ್ಳಸಾಗಣೆಗೆ ಕಡಿವಾಣ ಹಾಕಲು ಚೀನಾ ಜೊತೆ ಅಮೆರಿಕ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆ ಹೇಳಿದೆ. ಈಗ ಗಡೀಪಾರು ಮಾಡಲಾಗಿರುವ ಚೀನಾ ವಲಸಿಗರು ಅಮೆರಿಕದಲ್ಲಿ ಎಷ್ಟು ಸಮಯದಿಂದ ಇದ್ದರು ಎಂಬ ಪ್ರಶ್ನೆಗಳಿಗೆ ಅಮೆರಿಕ ಪ್ರತಿಕ್ರಿಯೆ ನೀಡಿಲ್ಲ.

ಚೀನಾದ ಅಕ್ರಮ ವಲಸಿಗರನ್ನು ಅವರ ದೆಶಕ್ಕೆ ಕಳುಹಿಸುವುದೇ ಅಮೆರಿಕಕ್ಕೆ ದೊಡ್ಡ ಸವಾಲಾಗಿತ್ತು. ಏಕೆಂದರೆ, ಅವರನ್ನು ದೇಶಕ್ಕೆ ಸೇರಿಸಿಕೊಳ್ಳಲು ಚೀನಾ ಆಡಳಿತ ಸಿದ್ಧವಿರಲಿಲ್ಲ. ಕಳೆದ ವರ್ಷ ಮೆಕ್ಸಿಕೊ ಮೂಲಕ ಭಾರಿ ಪ್ರಮಾಣದ ಚೀನಾ ವಲಸಿಗರು ಅಮೆರಿಕಕ್ಕೆ ಬಂದಿರುವುದು ಗಮನಕ್ಕೆ ಬಂದಿತ್ತು.

2023ರಲ್ಲಿ ಅಮೆರಿಕದ ವಲಸೆ ಅಧಿಕಾರಿಗಳು ಮೆಕ್ಸಿಕೊ ಗಡಿಯಲ್ಲಿ 37,000 ಚೀನಾ ಪ್ರಜೆಗಳನ್ನು ಬಂಧಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು 10 ಪಟ್ಟು ಹೆಚ್ಚಾಗಿದೆ.

ಚೀನಿಯರ ವಲಸೆ ವಿಚಾರವನ್ನು ರಿಪಬ್ಲಿಕ್ ಪಕ್ಷ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿರಂತರವಾಗಿ ಪ್ರಸ್ತಾಪಿಸಿದ್ದರು. ಚೀನಾ ವಲಸಿಗರು ಅಮೆರಿಕಕ್ಕೆ ಬರುತ್ತಿರುವ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.