ಟೊಕಿಯೊ: ಜಪಾನ್ ರಾಜಧಾನಿ ಟೊಕಿಯೊದ ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ಜಪಾನ್ ಏರ್‌ಲೈನ್ ವಿಮಾನವೊಂದು ಇನ್ನೊಂದು ವಿಮಾನಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ದುರಂತದಲ್ಲಿ ಡಿಕ್ಕಿಹೊಡೆದ ವಿಮಾನದಲ್ಲಿದ್ದ 379 ಜನರು ಸುರಕ್ಷಿತವಾಗಿದ್ದಾರೆ.

ಬೆಂಕಿ ಹೊತ್ತಿಕೊಂಡ ವಿಮಾನದಿಂದ ಪ್ರಯಾಣಿಕರು ಹೊರಬರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗ್ಲೋಬಲ್ ಏವಿಯೇಷನ್ ಸೇಫ್ಟಿ ವೆಬ್‌ಸೈಟ್ JACDED, ತುರ್ತು ನಿರ್ಗಮದ ದ್ವಾರದಿಂದ ಪ್ರಯಾಣಿಕರು ಕೆಳಗೆ ಜಾರುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದೆ. ಪ್ರಯಾಣಿಕರು ಕೆಳಗೆ ಜಾರುತ್ತಿರುವ ವೇಳೆ ಒಂದು ಎಂಜಿನ್ ಇನ್ನೂ ಚಾಲನೆಯಲ್ಲಿರುವುದನ್ನು ಕಾಣಬಹುದು.

ದುರಂತವೆಂದರೆ ಜಪಾನ್ ಏರ್‌ಲೈನ್‌ನ ಏರ್‌ಬಸ್ ಎ350 ವಿಮಾನ ಡಿಕ್ಕಿ ಹೊಡೆದ ತಕ್ಷಣವೇ ಕೋಸ್ಟ್‌ಗಾರ್ಡ್ ಬೆಂಕಿ ಹೊತ್ತಿಕೊಂಡಿದ್ದರಿಂದ ಅದರಲ್ಲಿದ್ದ ಐವರು ಸಿಬ್ಬಂದಿ ಸ್ಥಳದಲ್ಲೇ ಮೃತರಾಗಿದ್ದಾರೆ.
.ಟೊಕಿಯೊ: ಎರಡು ವಿಮಾನಗಳ ನಡುವೆ ಡಿಕ್ಕಿ– ಜಪಾನ್ ಕೋಸ್ಟ್ ಗಾರ್ಡ್ನ ಐವರ ಸಾವು.ರನ್ವೇನಲ್ಲಿ ಹೊತ್ತಿ ಉರಿದ ಜಪಾನ್ ವಿಮಾನ: ಎಲ್ಲ ಪ್ರಯಾಣಿಕರು ಸುರಕ್ಷಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.