ವಿಶ್ವದಾದ್ಯಂತ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ‘ಗುರುತು ಪತ್ತೆಯಾಗದ ವಸ್ತು’ವೊಂದರ ಹಾರಾಟದ ದೃಶ್ಯಗಳನ್ನು ಸೆರೆ ಹಿಡಿದಿದ್ದು ನಾವೇ ಎಂದು ಅಮೆರಿಕದ ವಾಯಸೇನೆ ಸೋಮವಾರ ಅಧಿಕೃತವಾಗಿ ತಿಳಿಸಿದೆ.

ವಸ್ತುವೊಂದು ಆಕಾಶದಲ್ಲಿ ಅತಿ ವೇಗವಾಗಿ ಹಾರಾಡುತ್ತಿರುವ ಮೂರು ದೃಶ್ಯಗಳು 2007ರಿಂದ 2017ರ ಅವಧಿಯಲ್ಲಿ ವಾಯುಸೇನೆಯಿಂದ ಸೋರಿಕೆಯಾಗಿದ್ದು, ಜಗತ್ತಿನಾದ್ಯಂತ ವೈರಲ್ ಆಗಿತ್ತು. ಆದರೆ, ಈ ವಿಡಿಯೊ ಕುರಿತು ಅನುಮಾನಗಳು, ನಿರಾಕರಣೆಗಳೂ ಕೇಳಿ ಬಂದಿದ್ದವು. ಹೀಗಿರುವಾಗಲೇ ಅಮೆರಿಕ ವಾಯು ಸೇನೆ ಇದು ತಾನೇ ಸೆರೆ ಹಿಡಿದ ವಿಡಿಯೋ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ದೃಶ್ಯದಲ್ಲಿ ಸೆರೆಯಾಗಿರುವ ವಸ್ತು ಏನೆಂದು ಪತ್ತೆ ಮಾಡಲು ನಮಗೆ ಸಾಧ್ಯವಾಗಿಲ್ಲ,’ ಎಂದು ಅದು ಹೇಳಿದೆ.

ಈ ವಿಡಿಯೊ ಅಸಲಿಯೋ, ಸುಳ್ಳೋ ಎಂಬುದರ ಕುರಿತು ಜನರಲ್ಲಿ ಇರಬಹುದಾದ ಅನಮಾನಗಳನ್ನು ನಿವಾರಿಸುವ ಉದ್ದೇಶದಿಂದ ಅಮೆರಿಕ ಸೇನೆ ವಿಡಿಯೊ ತಾನೇ ಸೆರೆ ಹಿಡಿದಿದ್ದು ಎಂದು ತಿಳಿಸಿದೆ. ಈ ದೃಶ್ಯಗಳನ್ನು 2004ರಲ್ಲಿ ಸೆರೆಹಿಡಿಯಲಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.