ಇಸ್ಲಾಮಾಬಾದ್: ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆಗೆ ಶನಿವಾರ ಮತದಾನ ಆರಂಭವಾಗಿದ್ದು, ಅಸಿಫ್ ಅಲಿ ಜರ್ದಾರಿ ಎರಡನೇ ಬಾರಿ ಅಧ್ಯಕ್ಷರಾಗುವುದು ಖಚಿತವಾಗಿದೆ.

ಬೆಳಿಗ್ಗೆ 10 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆವರೆಗೂ ನಡೆಯಲಿದೆ.
.ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆ: ಜರ್ದಾರಿ, ಅಚಕ್‌ಜಾಯಿ ನಾಮಪತ್ರ.
ಆಡಳಿತರೂಢ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಹಾಗೂ ಪಾಕಿಸ್ತಾನ್ ಮುಸ್ಲಿಂ ಲೀಗ್– ನವಾಜ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಆಸಿಫ್ ಅಲಿ ಜರ್ದಾರಿ ಹಾಗೂ ಸುನ್ನಿ ಇತ್ತೇಹಾದ್ ಕೌನ್ಸಿಲ್ ಪಕ್ಷದ ಅಭ್ಯರ್ಥಿಯಾಗಿ ಮಹ್ಮೂದ್ ಖಾನ್ ಅಚಕ್‌ಜಾಯಿ ಅವರು ಕಣದಲ್ಲಿದ್ದಾರೆ.

ಹಾಲಿ ಅಧ್ಯಕ್ಷ ಡಾ. ಆರಿಫ್ ಅಲ್ವಿಯವರ ಐದು ವರ್ಷದ ಅವಧಿ 2023ರಲ್ಲಿ ಮುಕ್ತಾಯಗೊಂಡಿದ್ದರೂ, ಎಲೆಕ್ಟರಲ್ ಕಾಲೇಜು ರಚನೆ ಆಗದಿದ್ದರಿಂದ ಚುನಾವಣೆ ನಡೆದಿರಲಿಲ್ಲ.
.ಪಾಕಿಸ್ತಾನ | ಅಧ್ಯಕ್ಷೀಯ ಚುನಾವಣೆ ಮಾರ್ಚ್ 9ಕ್ಕೆ.
ಕೆಲ ದಿನಗಳ ಹಿಂದಷ್ಟೇ ಚುನಾವಣೆ ನಡೆದು ಎಲೆಕ್ಟರಲ್ ಕಾಲೇಜು ರಚನೆಯಾಗಿದೆ. ಎಲೆಕ್ಟರಲ್ ಕಾಲೇಜು, ಫೆಡರಲ್ ಸರ್ಕಾರ ಹಾಗೂ ಪ್ರಾಂತೀಯ ಸರ್ಕಾರದ ಸಂಸದರು ಹಾಗೂ ಶಾಸಕರನ್ನು ಹೊಂದಿದೆ. ಇವರು ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.

ಆಡಳಿತರೂಢ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಹಾಗೂ ಪಾಕಿಸ್ತಾನ್ ಮುಸ್ಲಿಂ ಲೀಗ್– ನವಾಜ್ ಮೈತ್ರಿ ಪಕ್ಷಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವಷ್ಟು ಸಂಖ್ಯಾಬಲವಿದೆ. ಹೀಗಾಗಿ ಜರ್ದಾರಿ ಎರಡನೇ ಬಾರಿ ಅಧ್ಯಕ್ಷರಾಗುವುದು ಖಚಿತ.
.ಪಾಕಿಸ್ತಾನ: ಸಿಖ್ ಸಮುದಾಯದ ಮೊದಲ ಸಚಿವರಾಗಿ ರಮೇಶ್ ಅರೋರಾ ಪ್ರಮಾಣ ವಚನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.